Header Ads Widget

ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರ ಇರಲ್ಲ : ಕಾಂಗ್ರೆಸೇತರ ಶಕ್ತಿಗಳು ಒಂದಾಗಿ ಸರ್ಕಾರ ರಚಿಸಿದರೂ ಆಶ್ಚರ್ಯವಿಲ್ಲ : ಬಿ.ವೈ. ರಾಘವೇಂದ್ರ...!!

ಬೈಂದೂರು: ಚುನಾವಣೆ ಬಂದಾಗ ಅಭಿವೃದ್ಧಿ ವಿಷಯದ ಬಗ್ಗೆ ಕಾಂಗ್ರೆಸ್ ಚರ್ಚೆ ಮಾಡುವುದಿಲ್ಲ.   ಬಡವರನ್ನು ಬಡವರಾಗಿಯೇ ಉಳಿಸಿದ ಕಾಂಗ್ರೆಸ್ ಗೆ  ಮತದಾರರು 10 ವರ್ಷದ ಹಿಂದೆಯೇ ಚೊಂಬು ನೀಡಿದ್ದಾರೆ. ಚುನಾವಣೆ ನಂತರದಲ್ಲಿ ದೇಶದಲ್ಲಿ ಕಾಂಗ್ರೆಸ್‌ಗೆ  ಆದ ಪರಿಸ್ಥಿತಿ ಕರ್ನಾಟಕದಲ್ಲೂ ಆಗಲಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸೇತರ ಶಕ್ತಿಗಳು  ಒಂದಾಗಬೇಕು ಎಂದು ಕೈ ಜೋಡಿಸಿದ್ದಾರೆ. ಹೀಗಾಗಿ  ಚುನಾವಣೆ ಆದ ಮೇಲೆ ಕಾಂಗ್ರೆಸೇತರ  ಸಮ್ಮಿಶ್ರ ಸರಕಾರ ಬಂದರೂ ಆಶ್ಚರ್ಯ ಪಡಬೇಕಲಾಗಿಲ್ಲ ಎಂದು ಶಿವಮೊಗ್ಗ ಕ್ಷೇತ್ರದ  ಸಂಸದರೂ ಆದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರು ಭವಿಷ್ಯ ನುಡಿದಿದ್ದಾರೆ.

ಮಹಿಳಾ ಸಮಾವೇಶದ ನಂತರ ಮಾಧ್ಯಮದವರೊಂದಿಗೆ ಮಾತ‌ನಾಡಿದ ಅವರು,  ಸಮೃದ್ಧ ಬೈಂದೂರಿನ ರೂವಾರಿ ಶಾಸಕ ಮಿತ್ರ ಗುರುರಾಜ ಗಂಟಿಹೊಳೆ ಹಾಗೂ ಮಂಡಲ ಬಿಜೆಪಿ ಸೇರಿಕೊಂಡು ಮಹಿಳೆಯರ ದೊಡ್ಡ ಸಮಾವೇಶ ಮಾಡಿದ್ದಾರೆ. 15 ರಿಂದ 25 ಸಾವಿರಕ್ಕೂ ಅಧಿಕ ಮಹಿಳೆಯರು ಮಹಿಳಾ ಸಮಾವೇಶದಲ್ಲಿ ಸೇರಿದ್ದಾರೆ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ನಂತರ ಜನರ ಜೇಬಿಗೆ ಕೈ ಹಾಕಿ, ತೆರಿಗೆ ಹೆಚ್ಚಳ ಮಾಡಿ, ಸಬ್ ರಿಜಿಸ್ಟರ್ ವ್ಯಾಲ್ಯೂ ಶುಲ್ಕ ಹೆಚ್ಚಿಸಿ, ಅಬಕಾರಿ ಶುಲ್ಕ ಹೆಚ್ಚಿಸಿ ಜನರಿಂದಲೇ ಹಣ ಕಿತ್ತುಕೊಳ್ಳುತ್ತಿದೆ. ಇದರ ಬಗ್ಗೆ ಜನರಲ್ಲಿ ಆಕ್ರೋಶವಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸಿಗರು ಗ್ಯಾರಂಟಿ ಹೇಳುತ್ತಿದ್ದಾರೆ. ಗ್ಯಾರಂಟಿ ಪ್ರಾಮಾಣಿಕವಾಗಿ ಜನರಿಗೆ ಮುಟ್ಟಿಲ್ಲ. ಕಾಂಗ್ರೆಸ್‌ನ ಹಿಂದೂ ವಿರೋಧಿ ಧೋರಣೆಯಿಂದ ಕಾಂಗ್ರೆಸ್ ಮುಖಂಡರೇ ಬೇಸತ್ತು ಹೋಗಿದ್ದಾರೆ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಪ್ರಕರಣ ಏನಾಯ್ತು ಎಂಬುದು ಗೊತ್ತಿದೆ. ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ನೇಹಳ ಬರ್ಭರ ಹತ್ಯೆಯಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಮ್ಮ ಅನೇಕ ಕಾರ್ಯಕರ್ತರು ಜೀವ ಕಳೆದುಕೊಂಡಿದ್ದಾರೆ. ಹಿಂದೂ ದೇವಸ್ಥಾನಕ್ಕೆ ಬರ ಹಣ ಬೇರೆಯವರಿಗೆ ನೀಡುವ ಮಸೂದೆ ತರಲು ಕಾಂಗ್ರೆಸ್ ಮುಂದಾಗಿತ್ತು. ಬಹು ಸಂಖ್ಯಾತ ಹಿಂದುಗಳ ಭಾವನ ಕೆರಳಿಸುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಜನರು ಎಲ್ಲವನ್ನು ಸಹಿಸಿಕೊಳ್ಳುವುದಿಲ್ಲ. ರಾಜ್ಯ ಸರ್ಕಾರ ಬರಗಾಲದಲ್ಲಿ ಜನರ ಕಣ್ಣೀರು ಒರೆಸಿಲ್ಲ, ಹೈನುಗಾರರಿಗೆ 680 ಕೋಟಿ ರೂ. ಸಬ್ಸಿಡಿ ನೀಡಲು ಬಾಕಿಯಿದೆ. ಹೀಗಾಗಿ ಈ ಸರ್ಕಾರ ಚುನಾವಣೆ ನಂತರ ಉಳಿಯಲ್ಲ ಎಂದರು.

ಮೂಕಾಂಬಿಕಾ ಕಾರೀಡಾರ್ ನಿರ್ಮಾಣ: 
ಕೊಲ್ಲೂರು ಕಾರೀಡಾರ್  ಪರಿಕಲ್ಪನೆಯ ಬಗ್ಗೆ ಪ್ರಧಾನಿ ಮೋದಿ ಅವರ ಗಮನಕ್ಕೂ ತರಲಾಗುವುದು. ಆದ್ಯತೆ ಮೇರೆಗೆ ಕೊಲ್ಲೂರು ಅಭಿವೃದ್ಧಿ ಮಾಡಲಾಗುವುದು. ದೇವಿಯ ಭಕ್ತನಾಗಿ  ಸೇವೆ ಸಲ್ಲಿಸಲಿದ್ದೇನೆ. ಮೂಕಾಂಬಿಕಾ ಕಾರೀಡಾರ್  ಸಂಬಂಧಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿ, ಎಷ್ಟು ಅಭಿವೃದ್ಧಿ ಮಾಡಲು ಸಾಧ್ಯವಿದೆಯೋ ಅಷ್ಟು ಅಭಿವೃದ್ಧಿ ಮಾಡಲಿದ್ದೇವೆ.

ಅಭಿವೃದ್ಧಿಗೆ ಆದ್ಯತೆ:
ಮರವಂತೆ ಹೊರಬಂದರು ನಿರ್ಮಾಣ ಎರಡನೇ ಹಂತದ ಕಾಮಗಾರಿಗೆ  82 ಕೋ.ರೂ. ಟೆಂಡರ್ ಆಗಿದೆ. ಸಿಆರ್‌ಝಡ್ ಸಮಸ್ಯೆಯಿದೆ ಕಾಮಗಾರಿ  ವಿಳಂಬವಾಗಿದೆ. ಅದರ ಬಗ್ಗೆ  ಈಗಲೂ ಫಾಲೋಪ್ ಮಾಡುತ್ತಿದ್ದೇವೆ. ನಮಗೆ ಪುಕ್ಕಟೆ ಪಬ್ಲಿಸಿಟಿ ಪಡೆದು ಮತ ಕೇಳುವ ಅವಶ್ಯಕತೆಯಿಲ್ಲ. ಆದರೆ ಕಾಂಗ್ರೆಸ್‌ನವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರವಾಗಿದೆ.  ಕ್ಷೇತ್ರ ವಿಂಗಡನೆಯಾದಾಗ ಬೈಂದೂರು ಬಿಡುವ ಪ್ರಶ್ನೆಯೇ ಇಲ್ಲ. ಕೊಲ್ಲೂರು ತಾಯಿ ಬೇರೆಯಲ್ಲ, ಕೊಲ್ಲೂರಿನ ಜನರು ಬೇರೆಯಲ್ಲ. ಇದನ್ನು  ಕನಸು ಮನಸಸಿನಲ್ಲೂ ಯೋಚಿಸಿಲ್ಲ.  ಹಾಗೇನಾದರೂ ಇದ್ದರೆ ದೇವರು ನೋಡಿಕೊಳ್ಳುತ್ತಾನೆ. ಆದರಂತೆ ಕಾಂಗ್ರೆಸ್‌ನ ಅಪಪ್ರಚಾರಕ್ಕೂ ಜನರು ಕಿವಿ ಕೊಡಬಾರದು ಎಂದು ಮನವಿ ಮಾಡಿದರು.

ಕರಾವಳಿ-ಮಲೆನಾಡು ಬೆಸೆಯುವ ಕಾರ್ಯ:
ಬಡವರಿಗೆ ಹೊಟ್ಟೆಮೇಲೆ ಹೊಡೆಯುವ ಕೆಲಸ ಎಂದೂ ನಾವು ಮಾಡುವುದಿಲ್ಲ.  ಜನರು ಬದುಕು ಕಟ್ಟಿಕೊಳ್ಳಲು ಏನು ಬೇಕೋ ಅದನ್ನು ಮಾಡುತ್ತೇವೆ.  800 ಕೋ.ರೂ. ವೆಚ್ಚದಲ್ಲಿ ಮನೆ ಮನೆಗೆ ವಾರಾಹಿಯ ಶುದ್ಧ ಕುಡಿಯುವ ನೀರು ನೀಡಲಾಗುವುದು,  ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ, ಉದ್ಯೋಗ ಸೃಷ್ಟಿ,  ರಾಷ್ಟ್ರೀಯ ಹೆದ್ದಾರಿ ಅಭಿವದ್ಧಿಯ ಜತೆಗೆ ಕರಾವಳಿ-ಮಲೆನಾಡು ಬೆಸೆಯಲು ಆಗುಂಬೆಯ 12 ಕಿ.ಮೀ. ಘಾಟಿಯಲ್ಲಿ ಟನಲ್ ನಿರ್ಮಾಣಕ್ಕೆ ತಾಂತ್ರಿಕ ಅನುಮೋದನೆ ಸಿಕ್ಕಿದೆ ಹಾಗೂ ಡಿಪಿಆರ್ ಸಿದ್ಧಪಡಿಸಲು 2 ಕೋ.ರೂ. ಬಂದಿದೆ. ಇದರಿಂದ ಕರಾವಳಿ- ಮಲೆ‌ನಾಡು ಬೆಸೆಯಲಿದೆ ಎಂದರು.

ಕಮಲದ ಚಿಹ್ನೆಗೆ ಮತ:
ಪಕ್ಷೇತರ ಅಭ್ಯರ್ಥಿಯಾಗಿ ಅವರು ಪ್ರಚಾರ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ನಾನು ಪ್ರಚಾರ ಮಾಡುತ್ತಿದ್ದೇವೆ. ಹಿಂದುತ್ವ ಎಂದರೆ ಬಿಜೆಪಿ, ಹಿಂದುತ್ವಕ್ಕೆ ಬೆಂಬಲವಾಗಿರುವವರು ನರೇಂದ್ರ ಮೋದಿ. ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಕಮಲದ ಹೂವಿಗೆ ಜನ ವೋಟು ಮಾಡಲಿದ್ದಾರೆ ಎಂದರು.

Post a Comment

0 Comments