ಮಣಿಪಾಲ: ಉಡುಪಿ ನಗರದ ಮಣಿಪಾಲ ಸಮೀಪ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರ ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳಾದ ಚೇತನ್, ಪವನ್ ಪಂಜು ಎಂಬವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಂಪತ್ ಪೂಜಾರಿ ಯಾನೆ ಪ್ರವೀಣ್ ಪರಾರಿಯಾಗಿದ್ದಾನೆ.
ಮಣಿಪಾಲ ಸರ್ಕಲ್ ಇನ್ಸ್‌ಪೆಕ್ಟರ್ ಟಿ ವಿ ದೇವರಾಜ್ ಅವರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ. ಪರಾರಿಯಾದ ಅರೋಪಿ ಪ್ರವೀಣ್ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಘಟನೆ ವಿವರ:
ಮಣಿಪಾಲ ಠಾಣಾ ಅ.ಕ್ರ: 29/2024 ಕಲಂ: 3, 4, 5, 6 ITP Act And 370 IPC
ವರದಿ ದಿನಾಂಕ: 01.02.2024
23:25 ಗಂಟೆಗೆ
ಪಿರ್ಯಾದಿದಾರರು
ದೇವರಾಜ್ ಟಿ. ವಿ.
ಪೊಲೀಸ್ ನಿರೀಕ್ಷಕರು
ಮಣಿಪಾಲ ಪೊಲೀಸ್ ಠಾಣೆ ಉಡುಪಿ ಜಿಲ್ಲೆ.
ಆರೋಪಿ:
1) ಪ್ರವೀಣ್ ಬೆಂಗಳೂರು (ತಲೆಮರೆಸಿಕೊಂಡಿರುತ್ತಾನೆ)
2) ಪವನ್ ಎ.ಎಂ. ಪ್ರಾಯ: 25 ವರ್ಷ ತಂದೆ: ಮಂಚಯ್ಯ, ವಾಸ: ಅನುವಾಡು, ಶನಿ ಮಹಾತ್ಮೆ ದೇವಸ್ಥಾನ ಹತ್ತಿರ, ಪಾಂಡವ ಪುರ ತಾಲೂಕು ಮಂಡ್ಯ ಜಿಲ್ಲೆ
3) ಚೇತನ್ ಸಿ.ಬಿ. ಪ್ರಾಯ: 32 ವರ್ಷ, ತಂದೆ: ದಿ: ಬೋರೇಗೌಡ, ವಾಸ: ದುದ್ದಾ ಹೋಬಳಿ, ಚಿಕ್ಕ ಗಂಗಾವಾಡಿ, ಮಂಡ್ಯ ತಾಲೂಕು ಮತ್ತು ಜಿಲ್ಲೆ
4) ಪಂಜು ಪ್ರಾಯ:35 ವರ್ಷ ತಂದೆ ದಿ ನಾರಾಯಣ ಪೂಜಾರಿ ವಾಸ: ಪಂಜುರ್ಲಿ ಅನುಗ್ರಹ, ಸೋಮೇಶ್ವರ ದೇವಸ್ಥಾನ ಹತ್ತಿರ, ಪಡುವರಿ ಗ್ರಾಮ, ಬೈಂದೂರು ತಾಲೂಕು ಜಿಲ್ಲೆ.
ಸಾರಾಂಶ:
ಈ ಪ್ರಕರಣದ ಸಾರಾಂಶವೇನೆಂದರೇ, ದಿನಾಂಕ: 01-02-2024 ರಂದು 19.00 ಗಂಟೆಗೆ ಪಿರ್ಯಾದಿದಾರರು ಠಾಣೆಯಲ್ಲಿದ್ದಾಗ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರ ಪವಿತ್ರ ರೆಸಿಡೆನ್ಸಿ (A) ಓಂ ಸ್ಟೋರ್ ಬಳಿ ಓರ್ವ ವ್ಯಕ್ತಿ ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿನಡೆಸಿ ಆರೋಪಿ ಪವನ್ ಎಂಬವನನ್ನು ವಶಕ್ಕೆ ಪಡೆದು ಆತನ ಹೇಳಿಕೆಯಂತೆ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಕುಕ್ಕುದಕಟ್ಟೆ ಕಾಜರಗುತ್ತು ಎಂಬಲ್ಲಿರುವ ಡೋರ್ ನಂಬರ್ 7-61(1) ನೇ ಶ್ರೀನಿಕೇತನ ಮನೆಗೆ ಪೋಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಇವರಿಂದ ಶೋಧನಾ ವಾರೆಂಟ್‌ನ್ನು ಪಡೆದುಕೊಂಡು ದಾಳಿನಡೆಸಿ ಆರೋಪಿ ಚೇತನ್ ಸಿ.ಬಿ. ಮತ್ತು ಆರೋಪಿ ಪಂಜು ಎಂಬವರನ್ನು ವಶಕ್ಕೆ ಪಡೆದು ಆರೋಪಿಗಳಿಂದ ಒಟ್ಟು 6 ಮೊಬೈಲ್‌ಗಳನ್ನು ಮತ್ತು ಮೂರು ಕಾಂಡೂಮ್‌ಗಳನ್ನು ಸ್ವಾಧೀನಪಡಿಸಿ ಕೊಂಡಿರುವುದಾಗಿದೆ. ಆರೋಪಿಗಳು ಮಹಿಳೆಯರನ್ನು ಶೋಷಣೆಯ ಉದ್ದೇಶಕ್ಕಾಗಿ ಬಲವಂತದಿಂದ ಕರೆದುಕೊಂಡು ಬಂದು ಅಕ್ರಮ ಲಾಭಕ್ಕಾಗಿ ವೇಶ್ಯಾವಾಟಿಕೆಗೆ ಬಳಸುತ್ತಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ. (ಪ್ರಕರಣದ ಮೂಲ ಪಿರ್ಯಾದಿಯನ್ನು ಲಗ್ತೀಕರಿಸಲಾಗಿದೆ).
0 Comments