Header Ads Widget

Whats-App-Image-2024-05-08-at-4-44-56-PM-4

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ : ಕಿರಣ್ ಕುಮಾರ್ ಉದ್ಯಾವರ...!!

ಉಡುಪಿ : ಕರಾವಳಿಯ ಸಮಸ್ಯೆಗಳನ್ನು ಪ್ರಧಾನಮಂತ್ರಿಗಳ ಗಮನಕ್ಕೆ ತರುವ ಅಭಿವೃದ್ಧಿಗೆ ಪೂರಕವಾಗುವ ಸಂಸದರು ಇಲ್ಲಿಗೆ ಬೇಕಾಗಿದ್ದಾರೆ ಎಂದು ಮಾಜಿ ತಾಲೂಕು ಪಂಚಾಯತ್ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಅವರು ಹೇಳಿದ್ದಾರೆ .

ಉಡುಪಿ ಜಿಲ್ಲೆ ಅಭಿವೃದ್ಧಿ ಕೆಲಸದಲ್ಲಿ ೧೦ ವರ್ಷ ಹಿಂದೆ ಬಿದ್ದಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಇರುವ ಉಡುಪಿಯಲ್ಲಿ ಒಂದೇ ಒಂದು ಐಟಿ ಅಥವಾ ಯುವಕ ಯುವತಿಯರಿಗೆ ಒಳ್ಳೆಯ ಉದ್ಯೋಗ ನೀಡುವಂತಹ ಯಾವುದೇ ಕಂಪನಿ ಕಾಣಸಿಗುವುದಿಲ್ಲ, ಇಲ್ಲಿನ ಯುವಕರು ಯುವತಿಯರು ಉದ್ಯೋಗ ಆರಸಿ ಇತರ ಕಡೆಗೆ ಹೋಗುತ್ತಿದ್ದಾರೆ ಆದು ನಿಲ್ಲಬೇಕು ಇಲ್ಲಿಯೇ ಇಲ್ಲಿನ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಸಿಗುವಂತಾಗಬೇಕು ಎಂದರು. ಈಗಾಗಲೇ ನಾವು ಉಡುಪಿ ನಗರದ ಹೊರವಲಯದಲ್ಲಿರುವ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆ ನಮ್ಮ ಕಣ್ಣ ಮುಂದಿದೆ. ಅಲ್ಲದೇ ಮಲ್ಲೆ ಪ್ರತಿಷ್ಟಿತ ಮೀನುಗಾರಿಕ ಬಂದರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಮಲ್ಪೆ ಬೀಚ್ ಗೆ ಹೋಗುವ ರಸ್ತೆಯ ಕಾಮಗಾರಿಯು ಇನ್ನೂ ಕುಂಠಿತವಾಗಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಕರಾವಳಿಯ ಮೀನುಗಾರರ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ಹಿಂದೆ ಮುಳುಗಡೆಯಾಗಿದ್ದ ಸುವರ್ಣ ತ್ರಿಭುಜ ಬೋಟ್‌ ಬಗ್ಗೆ ಯಾವುದೇ ಸರಿಯಾದ ಮಾಹಿತಿಯನ್ನು ಇನ್ನೂ ನೀಡಿಲ್ಲ. ಇದಕ್ಕೆ ಕಾರಣ ಇಲ್ಲಿನ ಯಾವುದೇ ಲೋಕಸಭಾ ಸದಸ್ಯರು ಈ ಬಗ್ಗೆ ಸರಿಯಾದ ಮಾಹಿತಿ ಪ್ರಧಾನಿಗಳ ಗಮನಕ್ಕೆ ತಂದಿಲ್ಲ. ಇಲ್ಲಿನ ಯಾವುದೇ ಲೋಕಸಭಾ ಸದಸ್ಯರು ತಮ್ಮ ಹೆಸರಿನಿಂದ ತಮ್ಮ ಅಭಿವೃದ್ಧಿ ಕಾರದಿಂದ ಗೆಲ್ಲದೇ ಬರೀ ಪ್ರಧಾನಮಂತ್ರಿಗಳ ಹೆಸರಲ್ಲಿ ಗೆದ್ದಿದ್ದಾರೆ. ಹೀಗಾಗಿ ಇಲ್ಲಿನ ಯಾವುದೇ ಸಮಸ್ಯೆಗಳು ಪ್ರಧಾನ ಮಂತ್ರಿಗಳವರೆಗೆ ಹೋಗುವುದಿಲ್ಲ. ಮುಂದೆ ಬರುವ ಸಂಸದರು ಕೂಡ ಪ್ರಧಾನಿಗಳ ಹೆಸರಲ್ಲಿ ಗೆದ್ದರೆ ಕರಾವಳಿಗೆ ಅನ್ಯಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹಾಗೂ ಮುಂದೆ ಓರ್ವ ಉತ್ತಮ ನಾಯಕನನ್ನು ನಾವು ಗೆಲ್ಲಿಸಿದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಪ್ರಧಾನಿಗಳ ಬಳಿ ಮಾತನಾಡಲು ಸಾಧ್ಯವಾಗುತ್ತದೆ ಆದುದರಿಂದ ಶಾಸಕರಾಗಿ, ಮಂತ್ರಿಗಳಾಗಿ, ಲೋಕಸಭಾ ಸದಸ್ಯರಾಗಿ ಅನುಭವ ಇರುವ ಶ್ರೀ ಜಯಪ್ರಕಾಶ್ ಹೆಗ್ಡೆಯವರನ್ನು ಆರಿಸಿ ಕಳಿಸಿದರೆ ಕರಾವಳಿ ಭಾಗದ ಜನರಿಗೆ ನ್ಯಾಯ ಒದಗಿಸಿದಂತಾಗುತ್ತದೆ. ಕೋಟ ಶ್ರೀನಿವಾಸ ಪೂಜಾರಿ ಅವರು ಓರ್ವ ಉತ್ತಮ ನಾಯಕ ಅವರು ರಾಜ್ಯದ ಅಭಿವೃದ್ಧಿಗೆ ಆಗತ್ಯವಾಗಿ ಬೇಕಾಗಿದ್ದಾರೆ . ಮತ್ತೊಂದೆಡೆ ಜಯಪ್ರಕಾಶ್ ಹೆಗ್ಡೆ ಅವರು ಕೂಡಾ ಓರ್ವ ಅಭಿವೃದ್ಧಿಗೆ ಪೂರಕವಾಗಿರುವ ಅಭ್ಯರ್ಥಿಯಾಗಿದ್ದಾರೆ. ಅವರು ಸಂಸದರಾಗಿ ದೇಶದ ಹಾಗೂ ಉಡುಪಿ ಚಿಕ್ಕಮಗಳೂರಿನ ಅಭಿವೃದ್ಧಿಗೆ ಬೇಕಾಗಿದ್ದಾರೆ.

ಯಾವುದೇ ರಾಜಕೀಯ ಪಕ್ಷದ ಪ್ರಚಾರ ಕಾವ್ಯದಲ್ಲಿ ಹಿಂದುಳಿದ ವರ್ಗದವರನ್ನು ಕಾಣಬಹುದು ಎಲ್ಲಾ ಕೆಲಸಕಾರದಲ್ಲು ಹಿಂದುಳಿದ ವರ್ಗದವರು ಮುಂದು ಅದೇ ರೀತಿ ಅನ್ಯಾಯ ಕೂಡ ಆಗುವುದು ಹಿಂದುಳಿದ ವರ್ಗದವರಿಗೆ ಮಾತ್ರ ಇದನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ. ಇತರರ ಹಾಗೇ ನಮ್ಮ ಮುಂದಿನ ಮಕ್ಕಳಿಗೆ ಉತ್ತಮ ಭವಿಷ್ಯ, ವಿದ್ಯಾಭ್ಯಾಸ ಉದ್ಯೋಗ ಸಿಗುವಂತಾಗಬೇಕು.

ಮೊಗವೀರರಿಗೆ ಬಿಲ್ಲವ ಮತ್ತು ಬಂಟರು ಎರಡು ಕಣ್ಣುಗಳಿದ್ದಂತೆ. ಇದರಲ್ಲಿ ನಾವು ನಮ್ಮ ಎರಡೂ ಕಣ್ಣುಗಳನ್ನು ಉಳಿಸಿಕೊಳ್ಳುವುದು ಅತೀಮುಖ್ಯ. ಇಬ್ಬರನ್ನು ರಾಜಕೀಯದ ಮುಂಚೂಣಿಯಲ್ಲಿರಿಸಬೇಕಾದರೇ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯದಲ್ಲಿ ಹಾಗೂ ಶ್ರೀ ಜಯಪ್ರಕಾಶ್ ಹೆಗ್ಡೆಯವರು ಸಂಸದರಾಗಿ ದೇಶದಲ್ಲಿರುವುದು ಅತಿಮುಖ್ಯ. ಮೊಗವೀರರಿಗೆ ದೇಶದಲ್ಲಿ ಸಂಸದರಾಗಿ ಶ್ರೀ ಜಯಪ್ರಕಾಶ್ ಹೆಗ್ಡೆ ಮತ್ತು ರಾಜ್ಯದಲ್ಲಿ ನಮ್ಮ ಪರವಾಗಿ ಹೋರಾಡಲು ಎರಡು ಶಕ್ತಿ ಸಿಕ್ಕಂತಾಗುತ್ತದೆ. ಆದುದರಿಂದ ನಾವು ಯೋಚಿಸಿ ಮತ ಹಾಕಬೇಕಾಗಿದೆ ಎಂದು ಕಿರಣ್ ಕುಮಾರ್ ಹೇಳಿದ್ದಾರೆ.

Post a Comment

0 Comments