Header Ads Widget

ಕೊಯನಾಡು: ಟೈರ್ ಸ್ಪೋಟಗೊಂಡು ಸುಟ್ಟು ಕರಕಲಾದ ಲಾರಿ...!!

ಕೊಡಗು ಸಂಪಾಜೆಯ ಫಾರೆಸ್ಟ್ ಆಫೀಸ್ ಬಳಿ ಲಾರಿಯೊಂದು ಬೆಂಕಿ ಅವಘಡಕ್ಕೆ ಸಿಲುಕಿ ಸುಟ್ಟು ಕರಕಲಾದ ಘಟನೆ ಇಂದು ಬೆಳಗ್ಗೆ 6 ಗಂಟೆಗೆ ಸಂಭವಿಸಿದೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ. 

ಚಲಿಸುತ್ತಿದ್ದ ಲಾರಿ ಟೈರ್ ಸ್ಪೋಟಗೊಂಡಿದೆ. ಸ್ಫೋಟದ ರಭಸಕ್ಕೆ ಚಾಲಕನ ಮೈಗೆ‌ ಕೂಡ ಬೆಂಕಿ ತಗುಲಿ ಗುಳ್ಳೆಗಳಾಗಿವೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಲಾರಿ ಮೈಸೂರು ಕಡೆಯಿಂದ ಮಂಗಳೂರಿನತ್ತ ಪೇಪರ್ ಬಂಡಲ್ ತೆಗೆದುಕೊಂಡು ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

Post a Comment

0 Comments