Header Ads Widget

ಚೆನ್ನೈ: ಅಕ್ರಮ ಚಿನ್ನ ಸಾಗಟ : 700 ಕೋ ರೂ. ಮೌಲ್ಯದ ಚಿನ್ನ ಮುಟ್ಟುಗೊಲು...!!

ಚೆನ್ನೈ: ತಮಿಳುನಾಡಿನ ಶ್ರೀಪೆರಂಬದೂರು ಕ್ಷೇತ್ರದ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮಿಂಜೂರು-ವಂಡಲೂರು ಹೊರವರ್ತುಲ ರಸ್ತೆಯಲ್ಲಿ ಮಿನಿ ಟ್ರಕ್‌ವೊಂದರಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಸುಮಾರು 700 ಕೋಟಿ ರೂ. ಮೌಲ್ಯದ 1,425 ಕೆ.ಜಿ. ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಸೂಕ್ತ ದಾಖಲೆ ಇಲ್ಲದೆ ಮಿನಿ ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಮಿನಿ ಲಾರಿಯಲ್ಲಿ 1,425 ಕೆಜಿ ಚಿನ್ನದ ಗಟ್ಟಿಗಳನ್ನು ಶ್ರೀಪೆರಂಬದೂರು ಬಳಿಯ ಕಾರ್ಖಾನೆಯ ಗೋದಾಮಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮಿನಿ ಟ್ರಕ್ ಮತ್ತು ಕಾರು ಎರಡನ್ನೂ ಹೆಚ್ಚಿನ ತನಿಖೆಗಾಗಿ ಶ್ರೀಪೆರಂಬದೂರು ಕಂದಾಯ ವಿಭಾಗೀಯ ಕಚೇರಿಗೆ ಕರೆದುಕೊಂಡುಹೋಗಿದ್ದು, ಘಟನೆ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

Post a Comment

0 Comments