Header Ads Widget

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮುಂಬೈನಲ್ಲಿ 45 ಕೋಟಿ ಬೆಲೆಬಾಳುವ ಮನೆ ಖರೀದಿ...!!


ಮಂಗಳೂರು: ಎಪ್ರಿಲ್ 15: ಬಾಲಿವುಡ್ ಸೇರಿದಂತೆ ತಮಿಳು ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಮುಂಬೈನಲ್ಲಿ 45 ಕೋಟಿ ಬೆಲೆ ಬಾಳುವ ಐಷರಾಮಿ ಮನೆ ಖರೀದಿ ಮಾಡಿದ್ದಾರೆ.

ಮುಂಬೈನ ಬಾಂದ್ರಾದಲ್ಲಿ 45 ಕೋಟಿ ರೂ. ಮೌಲ್ಯದ ಮನೆ ಖರೀದಿ ಮಾಡಿದ್ದಾರೆ. ಮನೆಯ ವಿಸ್ತೀರ್ಣ 4000 ಚದರ ಅಡಿ ಎಂದು ಹೇಳಲಾಗ್ತಿದೆ. ಬಾಲಿವುಡ್ ಸ್ಟಾರ್ ನಟಿ- ನಟಿಯರು ವಾಸಿಸುವ ಏರಿಯಾದಲ್ಲಿಯೇ ಮನೆ ಖರೀದಿ ಮಾಡಿದ್ದಾರೆ.

ಬಾಲಿವುಡ್‌ನಲ್ಲಿ ರಶ್ಮಿಕಾ, ಶ್ರೀಲೀಲಾ ಹವಾ ಜಾಸ್ತಿ ಆದ್ಮೇಲೆ ಬಾಲಿವುಡ್‌ನತ್ತ ನಟಿ ಮುಖ ಮಾಡಿದ್ದರು. ಹಿಂದಿ ಸಿನಿಮಾಗಳಲ್ಲಿ ಅವಕಾಶಗಳು ಹೆಚ್ಚಾಗಿದ್ದು, ಈ ಹಿನ್ನಲೆ ಇದೀಗ ಬೆಲೆಬಾಳುವ ಮನೆ ಖರೀದಿಸಿದ್ದಾರೆ.

Post a Comment

0 Comments