Header Ads Widget

ಮುಂಬೈ: ಆಶ್ಲೀಲ ಚಿತ್ರದ ಶೂಟಿಂಗ್ : 13 ಮಂದಿಯ ಬಂಧನ...!!

ಮುಂಬೈ: ಮಹಾರಾಷ್ಟ್ರದ ಮುಂಬಯಿ ಸಮೀಪ ನೀಲಿ ಚಿತ್ರಗಳ (ಬ್ಲೂ ಫಿಲ್ಮ್) ನಿರ್ಮಾಣದಲ್ಲಿ ತೊಡಗಿದ್ದ ಗುಂಪೊಂದನ್ನು ಬಂಧಿಸಿರುವ ಘಟನೆಯೊಂದು ಲೊನಾವ್ಲಾದಲ್ಲಿ ಸಂಭವಿಸಿದೆ.

ಐಶಾರಾಮಿ ವಿಲ್ಲಾವೊಂದನ್ನು ಬಾಡಿಗೆ ಪಡೆದಿದ್ದ 15 ಮಂದಿಯ ತಂಡವೊಂದು ಅಲ್ಲಿಯೇ ನೀಲಿ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದು, ಈ ಶೂಟಿಂಗ್‌ನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಇದರ ಬೆನ್ನ ಹಿಂದೆ ಬಿದ್ದ ಲೊನಾವ್ಲಾ ಪೊಲೀಸರು ಗುಂಪನ್ನು ಬಂಧಿಸಿದ ಘಟನೆ ನಡೆದಿದೆ.

13 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಐದು ಮಂದಿ ಯುವತಿಯರು ಇದ್ದರು ಎಂದು ತಿಳಿದು ಬಂದಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದವರು ಸೇರಿ ನೀಲಿ ಚಿತ್ರ ಶೂಟಿಂಗ್‌ ಮಾಡುತ್ತಿದ್ದರು. ಡಿಜಿಟಲ್‌ ಫ್ಲಾಟ್‌ಫಾರ್ಮ್‌, ಒಟಿಟಿಗಳಿಗಾಗಿ ಈ ಯುವಕರು ನೀಲಿ ಚಿತ್ರದ ಚಿತ್ರೀಕರಣ ಮಾಡುತ್ತಿದ್ದರು ಎನ್ನಲಾಗಿದೆ.

ಚಿತ್ರೀಕರಣ ಮಾಡಿದ್ದ ಫುಟೇಜನ್ನು ವಶಪಡಿಸಿಕೊಳ್ಳಲಾಗಿದ್ದು, ಡಿಜಿಟಲ್‌ ಕ್ಯಾಮೆರಾ ಹಾಗೂ ಚಿತ್ರೀಕರಣಕ್ಕೆಂದು ಬಳಸಿದ್ದ ಇತರೆ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ‌ ಎಂದು ತಿಳಿದು ಬಂದಿದೆ.

Post a Comment

0 Comments