Header Ads Widget

Whats-App-Image-2024-05-08-at-4-44-56-PM-4

ವಿಟ್ಲ: ವ್ಯಕ್ತಿಯೋರ್ವ ನಗದು ಕೊಂಡು ಹೋಗುತ್ತಿದ್ದ ವೇಳೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳ ವಶಕ್ಕೆ...!!

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಅಧಿಕೃತ ದಾಖಲೆಗಳಿಲ್ಲದೆ ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ಕೊಂಡುಹೋಗುತ್ತಿದ್ದ ಬೃಹತ್ ಮೊತ್ತದ ನಗದನ್ನು ವಿಟ್ಲ ಸಮೀಪದ ನೆಲ್ಲಿಕಟ್ಟೆ ಚೆಕ್ ಪೋಸ್ಟ್‌ ನಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳ ಮೂಲದ ನಿತ್ಯನಿಧಿ ಸಂಗ್ರಾಹಕ ಧನಂಜಯ ಎಂಬವರು ನಗದು ಕೊಂಡು ಹೋಗುತ್ತಿದ್ದ ವೇಳೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಗೋಳ್ತಮಜಲು ಗ್ರಾಮಪಂಚಾಯತ್ ಪಿಡಿಒ , ಎಸ್.ಎಸ್.ಟಿ.ತಂಡದ ಮುಖ್ಯಸ್ಥ ವಿಜಯಶಂಕರ್ ಆಳ್ವ ಅವರ ತಂಡ ತನಿಖೆ ನಡೆಸಿ, ಸೂಕ್ತವಾದ ದಾಖಲೆಗಳಿಲ್ಲದ 99 ಸಾವಿರದ 800 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಧನಂಜಯ ಅವರು ದ್ವಿಚಕ್ರವಾಹನದಲ್ಲಿ ದಾಖಲೆಗಳಿಲ್ಲದ ನಗದನ್ನು ಕೊಂಡುಹೋಗುತ್ತಿದ್ದರು. ಧನಂಜಯ ಅವರು ಕೇರಳದಲ್ಲಿ ನಿತ್ಯನಿಧಿ ಸಂಗ್ರಾಹಕರಾಗಿದ್ದು, ನಿತ್ಯನಿಧಿಯ ಹಣ ಹಾಗೂ ಕರ್ನಾಟಕದ ರಾಜ್ಯದ ವಿಟ್ಲದ ಕನ್ಯಾನದಲ್ಲಿರುವ ಆಶ್ರಮಕ್ಕೆ ಬಂದು ಅಲ್ಲಿರುವ ಇಬ್ಬರು ಹಿರಿಯ ನಾಗರಿಕರ ಪಿಂಚಣಿಯ ಹಣವನ್ನು ನೀಡಿ ವಾಪಾಸು ಕೇರಳಕ್ಕೆ ಹೋಗುವು ವೇಳೆ ಹಣ ಸಿಕ್ಕಿದೆ ಎಂದು ಹೇಳಲಾಗಿದೆ.

ಇವರ ಜೊತೆಯಲ್ಲಿ ಇದ್ದ ಸಾವಿರಾರು ರೂ. ಗಳಿಗೆ ಸೂಕ್ತವಾದ ದಾಖಲೆಗಳಿದ್ದರೆ ಹತ್ತು ದಿನಗಳೊಳಗೆ ಜಿ.ಪಂ.ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಖ್ಯಸ್ಥರಾಗಿರುವ ಸಿ.ಎಸ್.ಆರ್.ಕಮಿಟಿಗೆ ದಾಖಲೆಯನ್ನು ಸಲ್ಲಿಸಿ ಹಣವನ್ನು ಪಡೆಯಲು ಅವಕಾಶವಿದೆ ಎಂದು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿ ಡಾ| ಉದಯ ಶೆಟ್ಟಿ ಮಾಹಿತಿ ನೀಡಿದ್ದಾರೆ.

Post a Comment

0 Comments