Header Ads Widget

ಮಣಿಪಾಲ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ : ಆರೋಪಿಗಳ ಬಂಧನ...!!

ಮಣಿಪಾಲ: ನಗರದಲ್ಲಿ ಕಾಲೇಜು ವಿದ್ಯಾರ್ಥಿ ಮೇಲೆ ಆರು ಮಂದಿಯ ತಂಡವೊಂದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೊಳಗಾದ ಮಣಿಪಾಲದ ವಿದ್ಯಾರ್ಥಿ ಅರುಶ್ ಕುಮಾರ್ ಎಂದು ತಿಳಿಯಲಾಗಿದೆ.

ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಘಟನೆ ವಿವರ:
ಪಿರ್ಯಾದಿದಾರರಾದ ಅರುಶ್‌ ಕುಮಾರ್‌ (21), ಈಶ್ವರ ನಗರ ಮಣಿಪಾಲ ಇವರು ದಿನಾಂಕ 23/03/2024 ರಂದು ರಾತ್ರಿ 10:45 ಗಂಟೆಗೆ ಡಿಟಿ ಬಾರ್ ಒಳಗೆ ಹೋದಾಗ ಕಿಕ್ಕಿರಿದು ತುಂಬಿದ್ದು, ಸರದಿಯಲ್ಲಿ ನಿಂತಿದ್ದ ಓರ್ವ ವ್ಯಕ್ತಿಯು ಅವರನ್ನು ತಳ್ಳುತ್ತಿದ್ದು, ಹಾಗೂ ಅದು ಹಾಗೆಯೇ ಮುಂದುವರಿದಾಗ ಪಿರ್ಯಾದಿದಾರರು ಆತನಲ್ಲಿ ನಾನು ನಿನಗಿಂತ ಮುಂದೆ ಇದ್ದೆನೆ, ನೀನು ನನ್ನ ಬಳಿಕ ಬಾ ಎಂದು ಹೇಳಿದಾಗ ಆತನು ಹಿಂಸಾತ್ಮಾಕವಾಗಿ ಪಿರ್ಯಾದಿದಾರ್ರನ್ನು ಹಿಡಿದಿರುತ್ತಾನೆ. ಪಿರ್ಯಾದಿದಾರರು ಅಲ್ಲಿಂದ ಹೊರಡಲು ಸಿದ್ದರಾದಾಗ ಅಲ್ಲಿದ್ದ ಒರ್ವ ವ್ಯಕ್ತಿಯು ಪಿರ್ಯಾದಿದಾರರಿಗೆ ಕೈಯಿಂದ ತಲೆಯ ಹಿಂದೆ ಎರಡು ಬಾರಿ ಹೋಡೆದಿರುತ್ತಾನೆ. 

ಅಲ್ಲಿಂದ ಪಿರ್ಯಾದಿದಾರರು ಅವರ ವಾಸ್ತವ್ಯ ಇರುವ ಹೆರ್ಗಾ ಗ್ರಾಮದ ಸರಳಬೆಟ್ಟಿನಲ್ಲಿರುವ ಲಕ್ಷ್ಮಿ ಮಂಜುನಾಥ ಅಪಾರ್ಟಮೆಂಟ್‌ನ ರೂಮ್ ನಂ: 202 ಕ್ಕೆ ಬಂದಾಗ ಆಪಾದಿತ 5-6 ಜನ ಆರೋಪಿಗಳು ಸೇರಿ ಪಿರ್ಯಾದಿದಾರರನ್ನು ಒಂದು ಜೀಪು ಹಾಗೂ ಸ್ಕೂಟಿಯಲ್ಲಿ ಹಿಂಬಾಲಿಸಿ ಅಪಾರ್ಟ್ ಮೆಂಟನ್ನು ಅಕ್ರಮ ಪ್ರವೇಶ ಮಾಡಿ ರೂಮಿನ ಬಳಿ ಬಂದು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿದಾರರ ಶರ್ಟನ್ನು ಹಿಡಿದು ಅವರ ಕೊರಳಲ್ಲಿದ್ದ ಬೆಳ್ಳಿ ಚೈನ್‌ನ್ನು ತುಂಡು ಮಾಡಿ ಪಿರ್ಯಾದಿದಾರರ ತಲೆಯನ್ನು ಗೊಡೆಗೆ ಜಜ್ಜಿದ್ದಲ್ಲದೇ, ಅವರು ಬಿದ್ದಾಗ ಬೆನ್ನಿಗೆ ತುಳಿದಿರುತ್ತಾರೆ. ಪಿರ್ಯಾದಿದಾರರು ಅಪಾರ್ಟಮೇಂಟ್‌ ಕೆಳಗೆ ಬೆಸ್‌‌ಮೆಂಟ್ ಗೆ ಹೋದಾಗ ಪುನಃ ಪಿರ್ಯಾದಿದಾರರಿಗೆ ಬೆದರಿಕೆ ಒಡ್ಡಿ, ಪಿರ್ಯಾದಿದಾರರ ಕನ್ನಡಕವನ್ನು ತುಂಡು ಮಾಡಿರುತ್ತಾರೆ. ಆಗ ಪಿರ್ಯಾದಿದಾರರ ರೂಮಿನ ಅಕ್ಕಪಕ್ಕದವರಾದ ನಿಶಾಂತ್, ಆಯುಷ್ಮನ್, ಆಂಜೇಶ್ ರವರು ಬಂದಾಗ ಅವರು ಪಿರ್ಯಾದಿದಾರರನ್ನು ಬಿಟ್ಟು ಹೋಗಿರುವುದಾಗಿದೆ. ಪಿರ್ಯಾದಿದಾರರ ಮೊಬೈಲ್‌ಗೆ ಒಬ್ಬರು ಕರೆ ಮಾಡಿ ಹೆದರಿಸಿ, ತೊಂದರೆ ನೀಡಿದ್ದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಪ್ರಕರಣ ಅಪರಾಧ ಕ್ರಮಾಂಕ 61/2024 ಕಲಂ: 143, 147, 448, 323, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Post a Comment

0 Comments