Header Ads Widget

ಉಡುಪಿ ಚಿಕ್ಕಮಗಳೂರು ಈಗ ಸೊರಕೆ ವರ್ಸಸ್ ಪ್ರಮೋದ್ : ಟಿಕೆಟ್ ಸಿಗದ ನಾಯಕರಿಬ್ಬರಿಗೆ ಪ್ರಚಾರ ಸಮಿತಿಯ ಹೊಣೆ : ಅತೃಪ್ತ ಬಿಲ್ಲವ ಮತ್ತು ಮೊಗವೀರರನ್ನು ಸಮಧಾನಗೊಳಿಸುವ ತಂತ್ರವೇ.?...!!

ಉಡುಪಿ: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಕೆಪಿಸಿಸಿ ಆಯ್ಕೆ ಮಾಡಿದೆ. ಈ ಮೂಲಕ ಕರಾವಳಿಯಲ್ಲಿ ಬಿಲ್ಲವ ಮತಗಳನ್ನು ಕ್ರೋಡೀಕರಿಸುವ ರಣತಂತ್ರವನ್ನು ಕಾಂಗ್ರೆಸ್ ಹೆಣೆದಿದೆ.

ಮಂಗಳೂರಿನ ಲೋಕಸಭಾ ಕ್ಷೇತ್ರದ ಸೊರಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊರಕೆ, ಈ ಹಿಂದೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಜನಪ್ರಿಯರಾಗಿದ್ದರು. ಈ ಕ್ಷೇತ್ರದಲ್ಲೀಗ ಬಿಜೆಪಿ ಇನ್ನೊಬ್ಬ ಬಿಲ್ಲವ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಈ ಕ್ಷೇತ್ರದ ಬಿಲ್ಲವ ಮತಗಳು ಕೈ ತಪ್ಪುವ ಆತಂಕದಲ್ಲಿರುವ ಕಾಂಗ್ರೆಸ್ ಸೊರಕೆ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಜಾತಿ ಮತಲೆಕ್ಕಾಚಾರನ್ನು ಸರಿದೂಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಮುಖಂಡ ಪದ್ಮರಾಜ್ ಗೆ ಮತ್ತು ಶಿವಮೊಗ್ಗದಲ್ಲಿ  ಬಿಲ್ಲವ ಯಾನೆ ಈಡಿಗ ಸಮುದಾಯದ ಗೀತಾ ಶಿವರಾಜಕುಮಾರ್ ಗೆ ಟಿಕೆಟ್ ನೀಡಲಾಗಿದೆ. ಉಡುಪಿ ಚಿಕ್ಕಮಗಳೂರಿನ ಕೊರತೆಯನ್ನು ಮತ್ತು ಸೊರಕೆ ಅವರಿಗೆ ನಾಯಕತ್ವ ನೀಡುವ ಮೂಲಕ ಅವರಿಗೆ ಟಿಕೆಟ್ ಸಿಗದ ಅತೃಪ್ತಿಯನ್ನು ಶಮನಗೊಳಿಸುವ ಪ್ರಯತ್ನವೂ ಆಗಿದೆ.

ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊಗವೀರರ ಮತ ಸೆಳೆಯಲು ಪ್ರಮೋದ್ ಮಧ್ವರಾಜ್ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆ.

ಪ್ರಮೋದ್ ಗೆ ಬಿಜೆಪಿಯಿಂದ ಉಡುಪಿ ಚಿಕ್ಕಮಗಳೂರಿನ ಟಿಕೆಟ್ ನೀಡಬೇಕು ಎಂದು ಮೊಗವೀರ ನಾಯಕರು ಒತ್ತಡ ಹೇರಿದ್ದರು. ಆದರೇ ಪ್ರಮೋದ್ ಪರ ಸ್ಥಳೀಯ ಬಿಜೆಪಿಯಲ್ಲಿ ಒಲವಿಲ್ಲದಿದ್ದುದರಿಂದ ಕೋಟ ಅವರಿಗೆ ಟಿಕೆಟ್ ಒಲಿದಿದೆ.
ಇದರಿಂದ ಬೇಸರಗೊಂಡಿರುವ ಬಿಜೆಪಿಯ ಸಾಂಪ್ರದಾಯಿಕ ಮೊಗವೀರರ ಮತಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಪ್ರಮೋದ್ ಅವರಿಗೇ ಕೋಟರನ್ನು ಗೆಲ್ಲಿಸುವ ಕಿಂಗ್ ಮೇಕರ್ ಹೊಣೆ ನೀಡಿದೆ.

ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸೊರಕೆ ಅವರನ್ನು ರಾತ್ರೋರಾತ್ರಿ ಕೈಬಿಟ್ಟು ಪ್ರಮೋದ್ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಇದು ಅವರಿಬ್ಬರ ಮಧ್ಯೆ ಗಾಢ ಬಿರುಕಿಗೆ ಕಾರಣವಾಗಿತ್ತು. ನಂತರ ಪ್ರಮೋದ್ ಬಿಜೆಪಿ ಸೇರಿದಾಗ ನಾಯಕನಿಲ್ಲದೇ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಸೊರಕೆ ಅವರೇ ಯಶಸ್ವಿಯಾಗಿ ಮುನ್ನಡೆಸಿದ್ದರು.

ಈಗ ಲೋಕಸಭೆಯ ಟಿಕೆಟ್ ತಪ್ಪಿಸಿಕೊಂಡಿರುವ ಸೊರಕೆ ಮತ್ತು ಪ್ರಮೋದ್ ಇಬ್ಬರೂ ಪ್ರಚಾರ ಕಾರ್ಯದಲ್ಲಿ ನೇರ ಮುಖಾಮುಖಿಯಾಗುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಗಳ ಈ ಕುತೂಹಲಕಾರಿ ರಣ ತಂತ್ರ ಎಷ್ಟು ಹೇಗೆ ಫಲಕಾರಿಯಾಗುತ್ತದೆ ಕಾದು ನೋಡಬೇಕು
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಕೆಪಿಸಿಸಿ ಆಯ್ಕೆ ಮಾಡಿದೆ. ಈ ಮೂಲಕ ಕರಾವಳಿಯಲ್ಲಿ ಬಿಲ್ಲವ ಮತಗಳನ್ನು ಕ್ರೋಡೀಕರಿಸುವ ರಣತಂತ್ರವನ್ನು ಕಾಂಗ್ರೆಸ್ ಹೆಣೆದಿದೆ.

ಮಂಗಳೂರಿನ ಲೋಕಸಭಾ ಕ್ಷೇತ್ರದ ಸೊರಕೆ ಟಿಕೆಟ್ ಆಕಾಂಕ್ಷಿಯಾಗಿದ್ದ ಸೊರಕೆ, ಈ ಹಿಂದೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿ ಜನಪ್ರಿಯರಾಗಿದ್ದರು. ಈ ಕ್ಷೇತ್ರದಲ್ಲೀಗ ಬಿಜೆಪಿ ಇನ್ನೊಬ್ಬ ಬಿಲ್ಲವ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಈ ಕ್ಷೇತ್ರದ ಬಿಲ್ಲವ ಮತಗಳು ಕೈ ತಪ್ಪುವ ಆತಂಕದಲ್ಲಿರುವ ಕಾಂಗ್ರೆಸ್ ಸೊರಕೆ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಜಾತಿ ಮತಲೆಕ್ಕಾಚಾರನ್ನು ಸರಿದೂಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.  

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಮುಖಂಡ ಪದ್ಮರಾಜ್ ಗೆ ಮತ್ತು ಶಿವಮೊಗ್ಗದಲ್ಲಿ  ಬಿಲ್ಲವ ಯಾನೆ ಈಡಿಗ ಸಮುದಾಯದ ಗೀತಾ ಶಿವರಾಜಕುಮಾರ್ ಗೆ ಟಿಕೆಟ್ ನೀಡಲಾಗಿದೆ. ಉಡುಪಿ ಚಿಕ್ಕಮಗಳೂರಿನ ಕೊರತೆಯನ್ನು ಮತ್ತು ಸೊರಕೆ ಅವರಿಗೆ ನಾಯಕತ್ವ ನೀಡುವ ಮೂಲಕ ಅವರಿಗೆ ಟಿಕೆಟ್ ಸಿಗದ ಅತೃಪ್ತಿಯನ್ನು ಶಮನಗೊಳಿಸುವ ಪ್ರಯತ್ನವೂ ಆಗಿದೆ.

ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮೊಗವೀರರ ಮತ ಸೆಳೆಯಲು ಪ್ರಮೋದ್ ಮಧ್ವರಾಜ್ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆ.
ಪ್ರಮೋದ್ ಗೆ ಬಿಜೆಪಿಯಿಂದ ಉಡುಪಿ ಚಿಕ್ಕಮಗಳೂರಿನ ಟಿಕೆಟ್ ನೀಡಬೇಕು ಎಂದು ಮೊಗವೀರ ನಾಯಕರು ಒತ್ತಡ ಹೇರಿದ್ದರು. ಆದರೇ ಪ್ರಮೋದ್ ಪರ ಸ್ಥಳೀಯ ಬಿಜೆಪಿಯಲ್ಲಿ ಒಲವಿಲ್ಲದಿದ್ದುದರಿಂದ ಕೋಟ ಅವರಿಗೆ ಟಿಕೆಟ್ ಒಲಿದಿದೆ.
ಇದರಿಂದ ಬೇಸರಗೊಂಡಿರುವ ಬಿಜೆಪಿಯ ಸಾಂಪ್ರದಾಯಿಕ ಮೊಗವೀರರ ಮತಗಳನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಪ್ರಮೋದ್ ಅವರಿಗೇ ಕೋಟರನ್ನು ಗೆಲ್ಲಿಸುವ ಕಿಂಗ್ ಮೇಕರ್ ಹೊಣೆ ನೀಡಿದೆ.

ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಸೊರಕೆ ಅವರನ್ನು ರಾತ್ರೋರಾತ್ರಿ ಕೈಬಿಟ್ಟು ಪ್ರಮೋದ್ ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಇದು ಅವರಿಬ್ಬರ ಮಧ್ಯೆ ಗಾಢ ಬಿರುಕಿಗೆ ಕಾರಣವಾಗಿತ್ತು. ನಂತರ ಪ್ರಮೋದ್ ಬಿಜೆಪಿ ಸೇರಿದಾಗ ನಾಯಕನಿಲ್ಲದೇ ಜಿಲ್ಲಾ ಕಾಂಗ್ರೆಸ್ ಪಕ್ಷವನ್ನು ಸೊರಕೆ ಅವರೇ ಯಶಸ್ವಿಯಾಗಿ ಮುನ್ನಡೆಸಿದ್ದರು.

ಈಗ ಲೋಕಸಭೆಯ ಟಿಕೆಟ್ ತಪ್ಪಿಸಿಕೊಂಡಿರುವ ಸೊರಕೆ ಮತ್ತು ಪ್ರಮೋದ್ ಇಬ್ಬರೂ ಪ್ರಚಾರ ಕಾರ್ಯದಲ್ಲಿ ನೇರ ಮುಖಾಮುಖಿಯಾಗುತ್ತಿದ್ದಾರೆ.ಕಾಂಗ್ರೆಸ್ ಮತ್ತು ಬಿಜೆಪಿಗಳ ಈ ಕುತೂಹಲಕಾರಿ ರಣ ತಂತ್ರ ಎಷ್ಟು ಹೇಗೆ ಫಲಕಾರಿಯಾಗುತ್ತದೆ ಕಾದು ನೋಡಬೇಕು.

Post a Comment

0 Comments