Header Ads Widget

Whats-App-Image-2024-05-08-at-4-44-56-PM-4

ಮಲ್ಪೆ ಬೀಚ್ ನಲ್ಲಿ ಪುಟ್ಟ ಮಗುವಿನ ಜೊತೆ ಸಮುದ್ರ ಸ್ನಾನಕ್ಕಿಳಿದ ಪೋಷಕರು : ಅಸ್ವಸ್ಥಗೊಂಡ ಮಗು : ಜೀವ ರಕ್ಷಿಸಿದ ಈಶ್ವರ್ ಮಲ್ಪೆ ಮತ್ತು ತಂಡ..!!

ಮಲ್ಪೆ: ಪ್ರವಾಸಿಗರ ಮನ ಸೆಳೆಯುವ ತಾಣವಾದ ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಗೆ ಪ್ರವಾಸಿಗರಾಗಿ ಆಗಮಿಸಿದ್ದ ಮೈಸೂರು ಮೂಲದ ದಂಪತಿಗಳು ತಮ್ಮ  ಒಂದುವರೆ ವರ್ಷ ಪ್ರಾಯದ ಪೂರ್ವಿ ಎಂಬ ಮಗುವಿನೊಂದಿಗೆ ಸಮುದ್ರ ಸ್ನಾನಕ್ಕಿಳಿದಿದ್ದರು.

ಸ್ನಾನ ಮಾಡುತ್ತಿರುವ ವೇಳೆ ಮಗು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ, ನೀರು ಕುಡಿದು, ಪ್ರಜ್ನಾಹೀನವಾಗಿತ್ತು ಎಂದು ತಿಳಿದು ಬಂದಿದೆ.
          
ಇದನ್ನು ಕಂಡ ಮಲ್ಪೆ ಬೀಚ್ ಅಟೋರಿಕ್ಷಾ ನಿಲ್ದಾಣದ ಅಟೋ ಚಾಲಕರು ಆಪತ್ಭಾಂಧವ ಈಶ್ವರ್ ಮಲ್ಪೆಯವರ ಆಂಬುಲೆನ್ಸ್ ತನಕ ಆ ಮಗುವನ್ನು ತನ್ನ ಅಟೋರಿಕ್ಷಾ ಮೂಲಕ ತಲುಪಿಸಿದರು.
   
ತಕ್ಷಣ ಕಾರ್ಯ ಪ್ರವ್ರತ್ತರಾದ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ  ಆ ಮಗುವಿಗೆ ಪ್ರಥಮ ಚಿಕಿತ್ಸೆ ನೀಡುತ್ತಾ , ಶರವೇಗದಲ್ಲಿ ತಮ್ಮ ಆಂಬುಲೆನ್ಸ್ ಮೂಲಕ  ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದರು.

ಸದ್ಯ ಮಗು  ಚೇತರಿಕೆಯನ್ನು ಕಾಣುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದೆ ಎಂದು ಮಾಹಿತಿ ತಿಳಿಯಲಾಗಿದೆ.

Post a Comment

0 Comments