Header Ads Widget

"ಗಾಡ್ ಪ್ರಾಮಿಸ್" ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ‌..!!

ಕುಂದಾಪುರ: ಮೈತ್ರಿ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಗಾಡ್ ಪ್ರಾಮಿಸ್' ಚಿತ್ರ ದ ಆಡಿಷನ್ ಇದೇ ತಿಂಗಳ ಮಾರ್ಚ್ 31ರ  ಭಾನುವಾರದಂದು  ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜ್ ನ ಕೋಯಾ ಕುಟ್ಟಿ ಹಾಲ್ ನಲ್ಲಿ ನಡೆಯಲಿದೆ. ಹಾಗೂ ಏಪ್ರಿಲ್  07  ಭಾನುವಾರದಂದು ಬೆಂಗಳೂರಿನ RNS ವಿದ್ಯಾನಿಕೇತನ್ ಅತ್ತಿಗುಪ್ಪೆ, ವಿಜಯನಗರದಲ್ಲಿ ಆಡಿಷನ್ ನಡೆಯಲಿದ್ದು ಎಲ್ಲಾ ವಯೋಮಿತಿಯವರಿಗೂ ಅವಕಾಶವಿದೆ. 

'ಗಾಡ್ ಪ್ರಾಮಿಸ್ʼ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರಕ್ಕೆ ಸೂಚನ್ ಶೆಟ್ಟಿ ನಿರ್ದೇಶನ, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಭರತ್ ಮಧುಸೂದನನ್ ಸಂಗೀತ ಹಾಗೂ ನವೀನ್ ಶೆಟ್ಟಿ ಸಂಕಲನವಿದ್ದು, ಚಿತ್ರೀಕರಣವು ಕುಂದಾಪುರದ ಸುತ್ತ ಮುತ್ತಲಿನ ಪರಿಸರದಲ್ಲಿ ನಡೆಯಲಿದೆ. 

ಕಳೆದ ವಾರವಷ್ಟೇ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆರವೇರಿದ್ದು, 
ಪೂಜೆಯಲ್ಲಿ ಚಿತ್ರತಂಡ ಭಾಗಿಯಾಗಿತ್ತು. ಮೇ ಮೊದಲ ವಾರದಿಂದ ʼಗಾಡ್ ಪ್ರಾಮಿಸ್ʼ ಚಿತ್ರದ ಶೂಟಿಂಗ್ ಆರಂಭವಾಗಲಿದೆ.

Post a Comment

0 Comments