Header Ads Widget

ಕಾರ್ಕಳ : ಅನಾರೋಗ್ಯದಿಂದ ಮನನೊಂದು ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ...!!

ಕಾರ್ಕಳ : ಮಾರ್ಚ್ : 28: ಪ್ರೈಮ್ ಟಿವಿ ನ್ಯೂಸ್ : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆ ಜೀವನದಲ್ಲಿ ನೊಂದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.26ರಂದು ಪಳ್ಳಿಯಲ್ಲಿ ಸಂಭವಿಸಿದೆ.

ಪಳ್ಳಿ ಗ್ರಾಮದ ನಯನಾ ಎಂಬವರ ತಾಯಿ ಜಯಂತಿ (58) ಆತ್ಮಹತ್ಯೆ ಮಾಡಿಕೊಂಡವರು.

ಮಾ.25ರಂದು ಜಯಂತಿ ಪಳ್ಳಿಯಲ್ಲಿರುವ ಮಗಳ ಮನೆಗೆ ಬಂದು ಬಳಿಕ ಯಾರಿಗೂ ಹೇಳದೆ ಚಿಕ್ಕಲಬೆಟ್ಟುವಿನಲ್ಲಿರುವ ತನ್ನ ಮನೆಗೆ ಹೋಗಿದ್ದರು.

ಮಾ.26ರಂದು ಪಕ್ಕದ ಮನೆಯವರು ನಯನಾಗೆ ಫೋನ್‌ ಮಾಡಿ ನಿಮ್ಮ ತಾಯಿಯ ಮನೆಯೊಳಗಿಂದ ಯಾರೋ ನರಳುವ ಧ್ವನಿ ಕೇಳಿಸುತ್ತಿದೆ ಎಂದು ತಿಳಿಸಿದ್ದರು. ಅದರಂತೆ ನಯನಾ ಗಂಡ, ತಂಗಿ ಜತೆಗೆ ಚಿಕ್ಕಲ್‌ಬೆಟ್ಟುವಿಗೆ ಧಾವಿಸಿದಾಗ ಜಯಂತಿ ನೆಲದ ಮೇಲೆ ಬಿದ್ದು ನರಳುತ್ತಿದ್ದರು. ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಒಯ್ದರೂ ಚಿಕಿತ್ಸೆ ಫಲಿಸದೆ ಸಂಜೆ ಮೃತಪಟ್ಟಿದ್ದಾರೆ. ಅವರು ವಿಷ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ.

ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments