Header Ads Widget

Whats-App-Image-2024-05-08-at-4-44-56-PM-4

ಅನುಮತಿ ಪಡೆಯದೆ ಹಂದಿಗುಂದಿ ಬೆಟ್ಟ ಹತ್ತಲು ಯತ್ನ : ಜ್ಯೋತಿರಾಜ್ ವಶಕ್ಕೆ...!!

ರಾಮನಗರ: ಮಾರ್ಚ್ : 22: ಅನುಮತಿ ಪಡೆಯದೆ ತಾಲ್ಲೂಕಿನ ಹಂದಿಗುಂದಿ ಬೆಟ್ಟವನ್ನು ಗುರುವಾರ ಏಕಾಂಗಿಯಾಗಿ ಹತ್ತಲು ಯತ್ನಿಸಿದ ಸಾಹಸಿಗ ಜ್ಯೋತಿರಾಜ್ (ಕೋತಿರಾಜ್) ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಟ್ಟ ಹತ್ತಲು ಅನುಮತಿ ನೀಡುವಂತೆ ಜ್ಯೋತಿರಾಜ್ ಐದಾರು ದಿನಗಳಿಂದ ಇಲಾಖೆಗೆ ಅನುಮತಿ ಕೋರಿದ್ದರು. ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಯ ಅನುಮತಿ ಸಹ ಪಡೆಯಿರಿ. ಆಮೇಲೆ ನಾವು ಅನುಮತಿ ಕೊಡುತ್ತೇವೆ ಎಂದು ಸೂಚಿಸಿದ್ದೆವು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ನಮ್ಮ ಸೂಚನೆ ಲೆಕ್ಕಿಸದೆ ಜ್ಯೋತಿರಾಜ್ ಬೆಳಿಗ್ಗೆ ಬೆಟ್ಟ ಹತ್ತುತ್ತಿರುವುದು ಗಮನಕ್ಕೆ ಬಂತು. ಕೂಡಲೇ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ವಲ್ಪ ದೂರ ಹತ್ತಿದ್ದ ಅವರನ್ನು ಕೆಳಕ್ಕೆ ಇಳಿಸಿ ವಶಕ್ಕೆ ಪಡೆದರು. ನಂತರ, ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಎಚ್ಚರಿಕೆ ನೀಡಿ ಕಳಿಸಿದೆವು. ಮೊಬೈಲ್‌ನಲ್ಲಿ ಜ್ಯೋತಿರಾಜ್ ಸೆರೆ ಹಿಡಿದಿದ್ದ ಬೆಟ್ಟ ಹತ್ತುವಾಗ ಸೆರೆ ಹಿಡಿದ ದೃಶ್ಯವನ್ನು ಡಿಲೀಟ್‌ ಮಾಡಿಸಲಾಗಿದೆ ಎಂದು ಹೇಳಿದರು.

Post a Comment

0 Comments