Header Ads Widget

Whats-App-Image-2024-05-08-at-4-44-56-PM-4

ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟ....!!

ನವದೆಹಲಿ, ಮಾ.16: ಪ್ರೈಮ್ ಟಿವಿ ನ್ಯೂಸ್ : ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದೆ. ಶನಿವಾರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ತಕ್ಷಣಕ್ಕೆ ಅನ್ವಯವಾಗುವಂತೆ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ. ಮತ ಎಣಿಕೆಯ ದಿನದವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ.

ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಒಂದನೇ ಹಂತದ ಮತದಾನ ಏಪ್ರಿಲ್ 19 ಶುಕ್ರವಾರ ನಡೆಯಲಿದೆ, ಎರಡನೆಯ ಹಂತದ ಮತದಾನ ಏಪ್ರಿಲ್ 26 ಶುಕ್ರವಾರ ನಡೆಯಲಿದೆ. ಮೂರನೇ ಹಂತದ ಮತದಾನ ಮೇ 7 ಮಂಗಳವಾರ ನಡೆಯಲಿದೆ. ನಾಲ್ಕನೇ ಹಂತದ ಮತದಾನ ಮೇ 13 ಸೋಮವಾರ ನಡೆಯಲಿದೆ. ಐದನೇ ಹಂತ- ಮೇ 20 ಸೋಮವಾರ, ಆರನೇ ಹಂತ- ಮೇ 25 ಶನಿವಾರ ಮತ್ತು ಏಳನೇ ಹಂತ- ಜೂನ್ 1 ಶನಿವಾರ ನಡೆಯಲಿದೆ. ಜೂನ್ 4 ದೇಶಾದ್ಯಂತ ಮತ ಎಣಿಕೆ ನಡೆಯಲಿದೆ.

ದೇಶದಲ್ಲಿ ಒಟ್ಟು 49.7 ಕೋಟಿ ಪುರುಷ ಮತದಾರರಿದ್ದಾರೆ, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48,000 ತೃತೀಯ ಲಿಂಗದವರಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತರು ಮಾಹಿತಿ ನೀಡಿದರು. 85 ಮತ್ತು ಅದಕ್ಕಿಂತ ಮೇಲ್ಪಟ್ಟ 82 ಲಕ್ಷ ಮತದಾರರಿದ್ದಾರೆ. 1.8 ಕೋಟಿ ಮೊದಲ ಬಾರಿ ಮತದಾನ ಮಾಡುವವರಿದ್ದಾರೆ (ಫಸ್ಟ್ ಟೈಮ್ ವೋಟರ್ಸ್ – 18 ಮತ್ತು 19 ವಯೋಮಿತಿಯವರು). 88.4 ಲಕ್ಷ ದಿವ್ಯಾಂಗ ಮತದಾರರಿದ್ದಾರೆ, 2.18 ಲಕ್ಷ ಶತಾಯುಷಿ ಮತದಾರರಿದ್ದಾರೆ. ಯುವ ಮತದಾರರು (20-29 ವರ್ಷದ ವಯೋಮಿತಿಯವರು) 19.74 ಕೋಟಿ ಇದ್ದಾರೆ.

ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್, ಡಾ. ಎಸ್.ಎಸ್. ಸಂಧು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments