Header Ads Widget

ಮಾ. 25ರಂದು ನಂದಳಿಕೆ ಸಿರಿ ಜಾತ್ರೆ, ಅಯನೋತ್ಸವ..!!


 ಕಾರ್ಕಳ: ಇತಿಹಾಸ ಪ್ರಸಿದ್ಧ ನಾಲ್ಕು ಸ್ಥಾನ, ಸಿರಿಕ್ಷೇತ್ರಗಳ ತವರೂರು ಎಂದೇ ಪ್ರಸಿದ್ಧಿಯನ್ನು ಪಡೆದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಂಭ್ರಮದ ನಂದಳಿಕೆ ಆಯನೋತ್ಸವ ಸಿರಿ ಜಾತ್ರೆ ಮಹೋತ್ಸವ ಮಾ.25ರಂದು ಜರುಗಲಿದೆ.

ಮಾ.22ರಂದು ರಾತ್ರಿ 10 ಗಂಟೆಗೆ ಧ್ವಜಾರೋಹಣ, ಮಹಾರಂಗಪೂಜೆ, ಉತ್ಸವ ಬಲಿ ಜರುಗಲಿದೆ. 

ಮಾ.23ರಂದು ಬೆಳಿಗ್ಗೆ 8.30ಕ್ಕೆ ಆರೋಗಣ ಬಲಿ, ಮಧ್ಯಾಹ್ನ 1 ಗಂಟೆಯಿಂದ ಶ್ರೀ ದೇವರ ಸನ್ನಿಧಿಯಿಂದ ಹಸಿರುವಾಣಿ ಹೊರ ಫಲಕಾಣಿಕೆಗಳ ಮಹಾ ಮೆರವಣಿಗೆಯ ಮೇಳಾರಂಭ, ರಾತ್ರಿ 9ಕ್ಕೆ ಒರಿ ಬಲಿ ಉತ್ಸವ, ಮಾ. 24ರಂದು ಬೆಳಿಗ್ಗೆ 9ಕ್ಕೆ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಸೇವೆ, ಶ್ರೀ ದೇವರಿಗೆ ಮಹಾಪೂಜೆ. ಅನ್ನಸಂತರ್ಪಣೆ, ರಾತ್ರಿ 9.30ಕ್ಕೆ ಅಂಬೊಡಿ ಜಾತ್ರೆ, ಅಂಬೊಡಿ ಉತ್ಸವ ಬಲಿ ನಡೆಯಲಿದೆ.

ಮಾ.25ರಂದು ನಂದಳಿಕೆ ಆಯನೋತ್ಸವ ಸಿರಿಜಾತ್ರೆ ಜರುಗಲಿದ್ದು, ಬೆಳಿಗ್ಗೆ 8ರಿಂದ ಶ್ರೀ ಗಂಧದ ರಜತ ಪಲ್ಲಕ್ಕಿಯಲ್ಲಿ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಅಬ್ಬಗದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಅಣ್ಣಪ್ಪ ದರ್ಶನ, ಹಸಿಮಡಲು ಚಪ್ಪರ ಕಟ್ಟೆಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ರಾತ್ರಿ 8 ರವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಡೆ ಆಗಮನದ ಪರಂಪರಾಗತ ಅದ್ದೂರಿಯ ಮೆರವಣಿಗೆ, ರಾತ್ರಿ 10.30ರಿಂದ ಅಯನೋತ್ಸವ ಬಲಿ, ವೈಭವದ ಕೆರೆದೀಪೋತ್ಸವ, ಶ್ರೀ ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ 11ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿಧಾನದಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಾಪೂರ್ವಕ ಸೂರ್ಯೋದಯ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿ ಜಾತ್ರೆ, ಪ್ರಾಚೀನ ವಿಧಿವೈಭವಗಳ ಬೆಳ್ಳಗಿನ ಜಾವ 4ರಿಂದ ಬ್ರಹ್ಮಮಂಡಲ ಸೇವೆ, ಬೆಳಗಿನ ಬಲಿ, ಭೂತ ಬಲಿ ಜರಗಲಿದೆ. 

ಮಾ.26ರಂದು ಊರ ಆಯನೋತ್ಸವ, ಮಧ್ಯಾಹ್ನ 11ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನೆರವೇರಲಿದೆ.

ಮಾ.27ರಂದು ರಾತ್ರಿ 8 ಕ್ಕೆ ದೀಪೋತ್ಸವ, ಮಾ.28ರಂದು ಬೆಳಿಗ್ಗೆ 9ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, ಮಧ್ಯಾಹ್ನ 11ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಮೂಡುಸವಾರಿ ಉತ್ಸವ, ಮಾ.29ರಂದು ಶ್ರೀ ಮನ್ಮಹಾರಥೋತ್ಸವ ಬೆಳಿಗ್ಗೆ 7ರಿಂದ ಶ್ರೀ ದೇವರಿಗೆ ಶತರುದ್ರಾಭಿಷೇಕ, ಬೆಳಿಗ್ಗೆ11.45ಕ್ಕೆ ರಥಾರೋಹಣ, ಮಧ್ಯಾಹ್ನ 1ರಿಂದ ಮಹಾಅನ್ನಸಂತರ್ಪಣೆ, ಸಂಜೆ 6ರಿಂದ ಭೂತರಾಜರಿಗೆ ದಂಡೆ ಬಲಿ ಸೇವೆ, ರಾತ್ರಿ 8ಕ್ಕೆ ಮಹಾರಥೋತ್ಸವ ಶ್ರೀ ದೇವರ ಬಲಿ ಉತ್ಸವ ಕವಾಟಬಂಧನ, ಮಾ.30ರಂದು ಬೆಳಿಗ್ಗೆ 7ಕ್ಕೆ ಕವಾಟೋದ್ಘಾಟನೆ, ಬೆಳಿಗ್ಗೆ 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ, ಮಧ್ಯಾಹ್ನ 3.30ಕ್ಕೆ ಪಡುಸವಾರಿ, ಅವಭ್ರಥ, ಧ್ವಜಾವರೋಹಣ. ಮಾ.31ರಂದು ಮಹಾಸಂಪ್ರೋಕ್ಷಣ, ಮಂಗಳ ಮಂತ್ರಾಕ್ಷತೆ, ಏ.13ರಂದು ಸಾಮೂಹಿಕ ಶ್ರೀ ಶನಿಪೂಜಾ ಮಹೋತ್ಸವ ಜರುಗಲಿದೆ ಎಂದು ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0 Comments