Header Ads Widget

Whats-App-Image-2024-05-08-at-4-44-56-PM-4

ತ್ರಾಸಿ: ಡಾನ್ ಬೋಸ್ಕೊ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮ..!!


ಕುಂದಾಪುರ: ತಾಲೂಕಿನ ತ್ರಾಸಿ ಡಾನ್ ಬೋಸ್ಕೊ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಸೋಮವಾರ ವಿಜೃಭಂಣೆಯಿಂದ ನಡೆಯಿತು.ರಾಜ್ಯ ಮತ್ತು ರಾಷ್ಟ್ರಮಟ್ಟದ ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ಜರುಗಿತು.

ಡಾನ್ ಬೋಸ್ಕೊ ಶಾಲೆಯ ಪ್ರಿನ್ಸಿಪಾಲ್ ಫಾ.ಮ್ಯಾಕ್ಸಿಮ್ ಡಿಸೋಜ ಅವರು ಮಾತನಾಡಿ,ಗ್ರಾಮೀಣ ಪ್ರದೇಶದಲ್ಲಿ 12 ವರ್ಷಗಳ ಹಿಂದೆ ನಿರ್ಮಾಣಗೊಂಡ ತ್ರಾಸಿ ಡಾನ್ ಬೋಸ್ಕೊ ಶಾಲೆ ಶಿಕ್ಷಣ ರೂಪದಲ್ಲಿ  ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದೆ.ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಜತೆಗೆ ಹಾಗೂ ಪಠ್ಯೇತರ ಚಟುವಟಿಯಲ್ಲಿಯೂ ಭಾಗ ವಹಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳನ್ನು ಜಯಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

ಶಿಕ್ಷಣದ ಜತೆಗೆ ಇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಅವರ ಪ್ರತಿಭೆ ಹೊರಬರಲು ಸಹಕಾರಿ ಆಗುತ್ತೆ ಎಂದು ಹೇಳಿದರು.ನುರಿತವಾದ ಶಿಕ್ಷಕವೃಂದದಿಂದ ಮಕ್ಕಳಿಗೆ ಉತ್ತಮವಾದ ಶಿಕ್ಷಣ ದೊರಕುತ್ತಿದ್ದು ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಶಾಲೆ ವಿದ್ಯೆಗೆ ಹೆಚ್ಚಿನ ಒತ್ತನ್ನು ನೀಡುವಲ್ಲಿ ಕೆಲಸ ಮಾಡುತ್ತಿದೆ ಎಂದರು.ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವ ದೃಷ್ಟಿಯಿಂದ ಇವೊಂದು ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.


ಡಾ.ಜಾನ್ಸನ್ ಡಿಲೀಮಾ ಮಾತನಾಡಿ,ಮಕ್ಕಳ ಚಿಕ್ಕ ಚಿಕ್ಕ ಯಶಸ್ಸನ್ನು ಕೊಂಡಾಡಿದಾಗ ಇನ್ನಷ್ಟು ಸಾಧನೆ ಮಾಡಲು ಅವರಿಗೆ ಸಹಕಾರಿ ಆಗುತ್ತದೆ.ವಿದ್ಯಾರ್ಥಿಗಳು ಚಿಂತನಾ ಶೀಲರಾಗುವುದರಿಂದ ಅವರ ಮನಸ್ಸು ಕೂತುಹಲಕಾರಿ ಯಿಂದ ಕೂಡಿರುತ್ತದೆ.ಪಾಠದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಜ್ಞಾನ ಮತ್ತು ಕೌಶಲ್ಯವನ್ನು ಸಂಪಾದನೆ ಮಾಡಿಕೊಳ್ಳ ಬಹುದು ಎಂದರು.ವಿದ್ಯಾರ್ಥಿಗಳು,ಶಿಕ್ಷಕರು, ಪೋಷಕರು  ಕೂಡಿಕೊಂಡಾಗ ಮಾತ್ರ ಸಕರಾತ್ಮಕ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಅಭಿಪ್ರಾಯ ಪಟ್ಟರು.ಒಂದು ವಿದ್ಯಾ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ವಿದ್ಯಾರ್ಥಿಗಳು,ಶಿಕ್ಷಕರು, ಪೋಷಕರ ಪ್ರೋತ್ಸಾಹ  ಅಗತ್ಯವಾಗಿದೆ ಎಂದು ಹೇಳಿದರು.

Post a Comment

0 Comments