Header Ads Widget

ಗೃಹ ಸಚಿವರ ಆಪ್ತನ ಸೋಗಿನಲ್ಲಿ ಎಂಬಿಬಿಎಸ್ ಸೀಟು ಕೊಡಿಸುವ ಆಮಿಷವೊಡ್ಡಿ 4.5 ಲಕ್ಷ ರೂಪಾಯಿ ವಂಚನೆ..!!


ಬೆಂಗಳೂರು: ನವೆಂಬರ್ : 13: ಪ್ರೈಮ್ ಟಿವಿ ನ್ಯೂಸ್ : ಗೃಹ  ಸಚಿವರ ಆಪ್ತನೆಂದು ಹೇಳಿಕೊಂಡ ವ್ಯಕ್ತಿ, ಎಂಬಿಬಿಎಸ್ ಸೀಟು ಕೊಡಿಸುವ ಆಮಿಷವೊಡ್ಡಿ 4.5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದು, ಈ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇಲ್ಲಿನ ಸ್ಥಳೀಯ ನಿವಾಸಿಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದರು. ಕೊರಟಗೆರೆಯವರು ಎನ್ನಲಾದ ಆರೋಪಿ ಮೊಹಮ್ಮದ್ ಜುಬೇರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೂರುದಾರರ ಮಗಳು ನೀಟ್ ಬರೆದಿದ್ದು, ತುಮಕೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆಯಲು ಪ್ರಯತ್ನಿಸಿದ್ದರು. ಆಗ ಆರೋಪಿ ಜುಬೇರ್ ಪರಿಚಯವಾಗಿತ್ತು. ಗೃಹ ಸಚಿವರ ಆಪ್ತನೆಂದು ಹೇಳಿಕೊಂಡಿದ್ದ ಜುಬೇರ್, ಅವರ ಜೊತೆಗಿನ ಫೋಟೊಗಳನ್ನು ತೋರಿಸಿದ್ದ. ಅದನ್ನು ದೂರುದಾರರು ನಂಬಿದ್ದರು ಎನ್ನಲಾಗಿದೆ.

ವೈದ್ಯಕೀಯ ಕಾಲೇಜಿನಲ್ಲಿ ಶುಲ್ಕ ಪಾವತಿ ಮಾಡಿರುವುದಾಗಿ ಹೇಳಿ ನಕಲಿ ರಶೀದಿ ಕಳುಹಿಸಿದ್ದ ಆರೋಪಿ, ದೂರುದಾರರಿಂದ 4.5 ಲಕ್ಷ ರೂಪಾಯಿ ಪಡೆದಿದ್ದ. ದಿನ ಕಳೆದರೂ ಕಾಲೇಜಿನಿಂದ ಸ್ಪಂದನೆ ಬಂದಿರಲಿಲ್ಲ. ಸೀಟಿನ ಬಗ್ಗೆ ಕಾಲೇಜಿನಲ್ಲಿ ವಿಚಾರಿಸಿದಾಗ, ನಕಲಿ ರಶೀದಿ ಎಂಬುದು ಗೊತ್ತಾಗಿತ್ತು. ದೂರುದಾರ ಸಹ ನಾಪತ್ತೆಯಾಗಿದ್ದ ಎಂದು ಮೂಲಗಳು ತಿಳಿಸಿವೆ.

Post a Comment

0 Comments