Header Ads Widget

ಬೆಂಗಳೂರು : ಪ್ರೇಯಸಿಯ ಅಶ್ಲೀಲ ಫೋಟೋಗಳನ್ನು ಜಾಲತಾಣಕ್ಕೆ ಹಾಕಿ ಆನಂದಪಡುತ್ತಿದ್ದ ವಿಕೃತ ಕಾಮುಕ ಅಂದರ್..!!


ಬೆಂಗಳೂರು:  ಪ್ರೈಮ್ ಟಿವಿ ನ್ಯೂಸ್ : ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ನಾಜೂಕಾಗಿ ವಂಚಿಸಿ ಅವರ ಅಶ್ಲೀಲ ಫೋಟೋಗಳನ್ನು ಜಾಲತಾಣಗಳಲ್ಲಿ ಹರಿಬಿಡುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುವತಿಯನ್ನು ವಂಚಿಸಿ ಅಶ್ಲೀಲ ಫೋಟೋ ಸಾಮಾಜಿಕ ಜಾಲತಾಣಕ್ಕೆ ಹಾಕಿದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ.

ಗೆಳತಿಯ ಅಶ್ಲೀಲ ಫೋಟೋಗಳನ್ನು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ಆರೋಪಿ ಸಂಜಯ್ ಕುಮಾರ್ (26) ಎಂಬಾತನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನ ವೆಲ್ಲೂರಿನ ಮೂಲದ ಸಂಜಯ್‌ ಅದೇ ಊರಿನ ಯುವತಿಯನ್ನು ಪ್ರೀತಿಸುವ ನಾಟಕವಾಡಿದ್ದ. ಇಬ್ಬರೂ ಕೂಡ 10 ನೇ ತರಗತಿಯಿಂದಲೂ ಪರಸ್ಪರ ಪರಿಚಯದವರಾಗಿದ್ದಾರೆ. ಈ ಜೋಡಿ ವಿವಾಹವಾಗಲು ಯೋಜಿಸಿದ್ದರು. ಆದರೆ ವಿಕೃತ ಕಾಮುಕ ಸಂಜಯ್ ಆಕೆಯ ಪೋಟೋಗಳನ್ನು ಜಾಲತಾಣಗಳಲ್ಲಿ ಹಾಕಿ  ಆನಂದ ಪಡೆಯುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಅರಿಯದ ಯುವತಿ ತನ್ನ ಗೆಳೆಯ ಸಂಜಯ್ ಕುಮಾರ್ ಜೊತೆಗೆ ತೆರಳಿ, ಟೆಲಿಗ್ರಾಮ್, ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ತಿರುಚಲಾದ, ಖಾಸಗಿ ಫೋಟೋಗಳನ್ನು ಯಾರೋ ಅಪ್ಲೋಡ್ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಕೈಗೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿರುವ ಫೋಟೋಗಳನ್ನು ತೆಗೆದು ಹಾಕುವಂತೆ ಹಾಗೂ ಯಾವ ಖಾತೆಯಿಂದ ಅಪ್ಲೋಡ್ ಆಗಿದೆ ಎಂಬ ಬಗ್ಗೆ ಮಾಹಿತಿ ನೀಡಲು ಸೂಚಿಸಿದ್ದರು. ತನಿಖೆಯಲ್ಲಿ ಯುವತಿಯ ಗೆಳೆಯನೇ ಈ ಫೋಟೋಗಳನ್ನು ಅಪ್ಲೋಡ್ ಮಾಡಿರುವ ಸತ್ಯ ಬಹಿರಂಗವಾಗಿದ್ದು, ಆತ ಗೆಳತಿಯದ್ದಷ್ಟೇ ಅಲ್ಲದೇ ಸ್ನೇಹಿತರದ್ದು ಹಾಗೂ ಸಂಬಂಧಿಕರ ಫೋಟೋಗಳನ್ನೂ ತಿರುಚಿ ಇದೇ ಮಾದರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಎಂದು ತಿಳಿದುಬಂದಿದೆ.

Post a Comment

0 Comments