Header Ads Widget

Whats-App-Image-2024-05-08-at-4-44-56-PM-4

ಮಂಗಳೂರು : ಮಸಾಜ್ ಪಾರ್ಲರ್ ಹೆಸರಿನಲ್ಲಿ ನಡೆಯುತ್ತಿದೆ ಅನೈತಿಕ ದಂಧೆ...!!

ಮಂಗಳೂರು : ನಗರ ಬೆಳೆದಂತೆ ಅಕ್ರಮ, ಅನೈತಿಕ ಚಟುವಟಿಕೆಗಳು ತಲೆ ಎತ್ತಲು ಆರಂಭಿಸುತ್ತವೆ ಎನ್ನುವುದಕ್ಕೆ ಉದಾಹರಣೆ ಎನ್ನುವಂತೆ ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ ಹೆಸರಿನಲ್ಲಿ ಮಸಾಜ್ ದಂಧೆಗಳ ಹಾವಳಿ ಕಡಲ ನಗರಿಯ ಹಲವೆಡೆ ನಡೆಯುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಬಗ್ಗೆ ನಮ್ಮ ಮಾಧ್ಯಮದಲ್ಲಿ ಹಲವು ವರದಿಗಳು ಈಗಾಗಲೇ ಬಂದಿದೆ. ಆದರೆ ಈ ಅಕ್ರಮದ ವಿರುದ್ಧ ಯಾವುದೇ ಕ್ರಮ ಜರಗಿಲ್ಲ. ಈ ಭಾರಿ ಒಳಗಡೆ ನಡೆಯುವ ಅಸಲಿ ದಂಧೆಯನ್ನು ಸಾಕ್ಷಿ ಸಮೇತ ಹಿಡಿದಿದ್ದೇವೆ.

ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವ ಮಸಾಜ್ ಪಾರ್ಲರ್ ಗಳ ಲಿಸ್ಟ್ ಇಲ್ಲಿದೆ ನೋಡಿ..
ಮೊದಲನೆಯದಾಗಿ ಮಂಗಳೂರಿನ ಹೆಸರಾಂತ ಫೈವ್ ಸ್ಟಾರ್ ಗೋಲ್ಡ್ ಫಿಂಚ್ ಹೋಟೆಲ್ ನ ಕೆಳ ಅಂತಸ್ತಿನಲ್ಲಿ "ಕಲರ್ಸ್ ಇಂಟರ್ ನ್ಯಾಷನಲ್" ಎಂಬ ಹೆಸರಿನ ಯೂನಿಸೆಕ್ಸ್ ಸೆಲೂನ್ ನ ಅಸಲಿ ಕಹಾನಿ ಬೇರೆಯೇ ಆಗಿದೆ. ಇದರ ಒಳಗಡೆ ನಡೆಯುತ್ತಿರುವುದು ಬರೀ ಮಸಾಜ್ ಅಲ್ಲ, ಒಂದು ರೀತಿ ಹೇಳಬೇಕಾದರೆ ವೇಶ್ಯಾವಾಟಿಕೆ ದಂಧೆ ಎಂದರೂ ತಪ್ಪಾಗದು. ಎರಡನೆಯದಾಗಿ ಲಾಲ್ ಭಾಗ್ ಬಿಜೈ ಬಳಿಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟ್ಯಾಂಡ್ ಪಕ್ಕದಲ್ಲಿರುವ "ಕಲರ್ಸ್ ಮಸಾಜ್ ಪಾರ್ಲರ್"..! ಇಲ್ಲಿ ಯಾರಿಗೂ ಗೊತ್ತೇ ಆಗದ ರೀತಿಯ ಒಳಗಡೆ ರೂಮ್ ಗಳಿವೆ. ಇಲ್ಲಿ ನಡೆಯುವುದು ಹೆಣ್ಣು ಮಕ್ಕಳ ದಂಧೆಯೇ ಹೌದು. 3-4 ಹೆಣ್ಣು ಮಕ್ಕಳನ್ನು ಇಟ್ಟುಕೊಂಡು ದಂಧೆ ನಡೆಸುತ್ತಿದ್ದಾರೆ.

ಮತ್ತೊಂದು ಕೊರಂಗಲ್ಪಾಡಿ ಜೈಲ್ ರೋಡ್ ನ  ಮಾಲ್ ನ ಕೆಳ ಅಂತಸ್ತಿನ ಬ್ಯೂಟಿ ಪಾರ್ಲರ್ ನಲ್ಲಿ ಕೂಡ ಇದೇ ದಂಧೆ ನಡೆಯುತ್ತಿದೆ... ಬೆಂದುರ್ವೆಲ್ ನ ಎಸ್ಸೆಲ್ ವೆಲ್ಕಾನ್ ಟವರ್ ನ 2ನೇ ಫ್ಲೋರ್ ನಲ್ಲಿರುವ ಒಂದು ಯುನಿಸೆಕ್ಸ್ ಸೆಲೂನ್ ಇವೆಲ್ಲಾ ಸಾಕ್ಷಿ ಸಮೇತ ಸಿಕ್ಕಿಬಿದ್ದಿರುವ ಪಾರ್ಲರ್ ಗಳಾದರೆ, ಇದನ್ನು ಬಿಟ್ಟು ಈ ದಂಧೆ ನಡೆಯತ್ತಿರುವ ಜಾಗಗಳು ಕೂಡ ಹಲವಾರು ಇವೆ.. ಬಲ್ಮಠ ಸ್ವಾಗತ್ ಹೋಟೆಲ್ ಮುಂಭಾಗ,ಕೆ.ಎಸ್. ರಾವ್ ರೋಡ್ ನ ಮೇಲಿನ ಅಂತಸ್ತಿನಲ್ಲಿ, ಕಂಕನಾಡಿ ಮೆಡಿಕಲ್ ಸಮೀಪದ ಶಾಲಿಮಾರ್ ಬಿಲ್ಡಿಂಗ್, ಬಿಜೈ ಸರ್ಕಲ್ ಸಮೀಪದ 2 ಕಟ್ಟಡದಲ್ಲಿ, ಕೊಟ್ಟಾರ ಚೌಕಿ ಸಮೀಪ, ಜ್ಯೋತಿ ಸರ್ಕಲ್ ಬಳಿಯ ಹೆಸರಾಂತ ಇಂಟರ್ ನ್ಯಾಷನಲ್ ಹೋಟೆಲ್ ನ ಕೆಳ ಅಂತಸ್ತು, ತೊಕ್ಕೊಟ್ಟು ಭಾಗದಲ್ಲಿ ಕೂಡ ಈ ಅಕ್ರಮ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ... ಒಟ್ಟಾಗಿ ಮಂಗಳೂರಿನಲ್ಲಿ 20-25 ಮಸಾಜ್ ಪಾರ್ಲರ್ ಗಳು ಕಾರ್ಯಾಚರಿಸುತ್ತಿದೆ.

ನೋಡೋದಕ್ಕೆ ಅದು ಮಾಮೂಲಿ ಸಲೂನ್, ಸ್ಪಾ ಸೆಂಟರ್ ಗಳು ಅಷ್ಟೇ.. ಒಳಹೊಕ್ಕರೆ ಕಾಣಸಿಗುವುದೇ ಕಾಮದೋಕುಳಿಯಾಟದ ರಮಣೀಯ ದೃಶ್ಯಗಳು. ಪೊಲೀಸರ ಕಣ್ಣಿಗೆ ಮಣ್ಣೆರಚಿ ಈ ಬ್ರೂಟಲ್ ದಂಧೆ ಆರಂಭವಾಗಿದೆ. ಇದು ಮಂಗಳೂರಿನ ಬಹುತೇಕ ಯುನಿಸೆಕ್ಸ್ ಸೆಲೂನ್, ಬ್ಯೂಟಿ ಸ್ಪಾ, ಫ್ಯಾಮಿಲಿ ಸೆಲೂನ್ ಹೆಸರಿನಲ್ಲಿ ಬೋರ್ಡ್ ಹಾಕಿಕೊಂಡು ನಡೆಸುವ ಅಕ್ರಮ ಚರ್ಮದಂಧೆ. ಕೆಲವು ವರ್ಷಗಳ ಹಿಂದೆ ನಗರದ ಹಲವೆಡೆ ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದ ಮಸಾಜ್ ಸೆಂಟರ್ ಗೆ ಬೀಗ ಬಿದ್ದ ಮೇಲೆ ಇದೀಗ ವೆರೈಟಿ ವೆರೈಟಿ ಹೆಸರಿನ ಮೂಲಕ ಬಾಗಿಲು ತೆಗೆದು ಯಾವುದೇ ರೀತಿಯ ಅನುಮತಿ, ಪರವಾನಿಗೆ ಏನನ್ನು ಪಡೆಯದೆ ಪ್ರಭಾವಿ ವ್ಯಕ್ತಿಗಳ ಪ್ರಭಾವದಿಂದ ಇಂತಹ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ.  ಇದು ಕೇವಲ ಮಸಾಜ್ ಗೆ ಸೀಮಿತವಾಗಿಲ್ಲ. ಇದರ ಸುತ್ತ ದೊಡ್ಡ ಮಾಫಿಯಾ ದಂಡೆ ಇದೆ ಎನ್ನುವುದು ತಿಳಿದುಬಂದಿದೆ.

ಗುಪ್ತ ಕ್ಯಾಮರಾಗಳನ್ನು ಅಳವಡಿಸಿ ಯುವಕ ಯುವತಿಯರ ಕಾಮದಾಟದ ಘಟನಾವಳಿಗಳನ್ನು ಚಿತ್ರಿಸಿ ನೀಲಿ ಚಿತ್ರವಾಗಿ ತಯಾರಿಸಿ ವಿದೇಶಕ್ಕೆ ರವಾನೆ ಮಾಡಲಾಗುತ್ತದೆ. ಬ್ಲೂ ಫಿಲಂ ದಂಧೆಯ ತಲೆ ಹಿಡುಕರು ಪಾರ್ಲರ್ ಸುತ್ತ ಹೊಂಚು ಹಾಕುತ್ತಿದ್ದಾರೆ. ಕರೆವೆಣ್ಣುಗಳ ವ್ಯಾಪಾರ ನಡೆಯುತ್ತಿದೆ. ಹಗಲು ಹೊತ್ತು ಬಾಡಿ ಮಸಾಜ್ ಗೈದರೆ, ರಾತ್ರಿ ಹೊತ್ತು ಪ್ರತಿಷ್ಠಿತ ಹೋಟೆಲ್ ಗಳಿಗೆ ಶ್ರೀಮಂತರು, ಪುಡಾರಿಗಳ ದೇಹ ತಣಿಸಲು ಮಾರಾಟವಾಗುತ್ತಾರೆ. ಸುಮಾರು 2000 ದಿಂದ 5000 ತೆತ್ತು ಮಸಾಜ್ ಪಾರ್ಲರ್ ಒಳಗೆ ನುಗ್ಗಿದರೆ ಎಲ್ಲ ರೀತಿಯ ಸುಖ ಅನುಭವಿಸ ಬಹುದು ನಮ್ಮ ಮಂಗಳೂರು ನಗರದಲ್ಲಿ. ಇದು ಊರಿಗೆ ಕೆಟ್ಟ ಹೆಸರು ತರುವುದಂತು ಖಂಡಿತ.

ಯಾವುದೇ ರೀತಿಯ ಅನುಮತಿ ಇಲ್ಲದೆ ಇಂತಹ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಯಾವುದೇ ಕಾನೂನು ಕ್ರಮ ಜರಗುತ್ತಿಲ್ಲ.!? ಇಂತಹ ಅಕ್ರಮ ಮಸಾಜ್ ಸೆಂಟರ್ ಗಳು ಮಂಗಳೂರಿನ ಹಲವೆಡೆ ತಲೆಯೆತ್ತಿರುವುದು ಮಂಗಳೂರಿಗೆ ಕಪ್ಪು ಚುಕ್ಕೆಯಾಗಿದೆ. ಮಂಗಳೂರು ನಗರದ ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿವೆ.

ಇದರ ವಿರುದ್ಧ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಕ್ರಮ ಜರಗಿಸುವ ಅಗತ್ಯ ಇದೆ. ಇಂತಹ ಅಕ್ರಮಕ್ಕೆ ಮಂಗಳೂ ರಿನ ಮಾನ್ಯ ಕಮೀಷನರ್ ಕುಲದೀಪ್ ಜೈನ್ ಅವರು ಸಂಪೂರ್ಣವಾಗಿ ಬ್ರೇಕ್ ಬೀಳುವ ಹಾಗೆ ಮಾಡಿ ಹೆಣ್ಣು ಮಕ್ಕಳ ಜೀವನ ರಕ್ಷಿಸಲಿ ಎನ್ನುವುದು ನಮ್ಮ ಆಶಯ.

Post a Comment

0 Comments