Header Ads Widget

ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡ ನಂತರ ಪತನ - ಇಬ್ಬರು ಪೈಲಟ್‌‌ಗಳು ನಾಪತ್ತೆ..!!


ನವದೆಹಲಿ :
ಅರುಣಾಚಲ ಪ್ರದೇಶದ ಬೊಮ್ಡಿಲಾ ಬಳಿ ಕಾರ್ಯಾಚರಣೆ ನಡೆಸುತ್ತಿದ್ದ ಆರ್ಮಿ ಏವಿಯೇಷನ್ ಚೀತಾ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡ ನಂತರ ಪತನಗೊಂಡಿದ್ದು, ಒಬ್ಬ ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬ ಮೇಜರ್ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಗುರುವಾರ ಬೆಳಗ್ಗೆ 09:15ರ ಸುಮಾರಿಗೆ ಹೆಲಿಕಾಪ್ಟರ್ ಬೋಮ್ಡಿಲಾ ಪಶ್ಚಿಮದ ಮಂಡಲ ಬಳಿ ಹೆಲಿಕಾಪ್ಟರ್ ಎಟಿಸಿ ಸಂಪರ್ಕ ಕಳೆದುಕೊಂಡಿದೆ ಎಂದು ವರದಿಯಾಗಿದೆ.

ಪೈಲಟ್ ಗಳಿಗಾಗಿ ಸೇನೆಯಿಂದ ಶೋಧಕಾರ್ಯ ನಡೆದಿದ್ದು, ಹೆಚ್ಚಿನ ಸುದ್ದಿ ಇನ್ನಷ್ಟೆ ತಿಳಿಯ ಬೇಕಿದೆ.

Post a Comment

0 Comments