Header Ads Widget

ಬ್ಯಾಡ್ಮಿಂಟನ್ ಆಡುವ ವೇಳೆ ಯುವಕ ಕುಸಿದು ಬಿದ್ದು ಮೃತ್ಯು..!!


ಹೈದರಾಬಾದ್:
 ಬ್ಯಾಡ್ಮಿಂಟನ್ ಆಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಶ್ಯಾಮ್ ಯಾದವ್ ಎನ್ನುವ ಯುವಕ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಡುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಮಂಗಳವಾರ ಸಂಜೆ ಶ್ಯಾಮ್‌ ಯಾದವ್‌ ಹೈದರಾಬಾದ್‌ನ ಲಾಲಾಪೇಟ್ ನಲ್ಲಿರುವ ಪ್ರೊ.ಜಯಶಂಕರ್ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುತ್ತಿದ್ದರು. ಈ ವೇಳೆ ಏಕಾಏಕಿ ಏದುಸಿರು ಬಿಡುತ್ತಾ ಕುಸಿದು ಬಿದ್ದಿದ್ದಾರೆ.

ಶ್ಯಾಮ್‌ ಯಾದವ್ ಆಫೀಸ್‌ ನಿಂದ ಬಂದು ಪ್ರತಿನಿತ್ಯದಂತೆ ಮಂಗಳವಾರ ಕೂಡ ಬ್ಯಾಡ್ಮಿಂಟನ್ ಆಡಲು ತೆರಳಿದ್ದಾರೆ. ಈ ವೇಳೆ ಆಡುವಾಗಲೇ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ, ಅವರು ಆದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Post a Comment

0 Comments