Header Ads Widget

Whats-App-Image-2024-05-08-at-4-44-56-PM-4

ಅದಮ್ಯ ಚೇತನಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಭೇಟಿ - ಶೂನ್ಯ ತ್ಯಾಜ್ಯ ಅಡುಗೆ ಮನೆ ನೋಡಿ ಶ್ಲಾಘನೆ ,ಅದಮ್ಯಚೇತನದ “ಅಮೃತ ಮಹೋತ್ಸವ - ಅನಂತ ಸೇವಾ ಉತ್ಸವ” ದಲ್ಲೂ ಭಾಗಿ..!!


ಬೆಂಗಳೂರು :
ಅದಮ್ಯ ಚೇತನ ಸಂಸ್ಥೆ ನಡೆಸುತ್ತಿರುವ ಶೂನ್ಯ ತ್ಯಾಜ್ಯ ಅಡುಗೆ ಮನೆಯಂತಹ ಹೊಸ ಸಾಧ್ಯತೆಗಳ ಬಗ್ಗೆ ಮಾನ್ಯ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್‌ ಷಾ ಬಹಳಷ್ಟು ಕುತೂಹಲದಿಂದ ವೀಕ್ಷಿಸಿದರು. 

ಇಂದು ಬೆಂಗಳೂರು ನಗರದ ಗವಿಪುರಗುಟ್ಟಳ್ಳಿಯಲ್ಲಿರುವ ಅದಮ್ಯ ಚೇತನ ಸಂಸ್ಥೆಯ - ಶೂನ್ಯ ತ್ಯಾಜ್ಯ ಅಡುಗೆ ಮನೆಗೆ ಭೇಟಿ ನೀಡಿ, ಅಡುಗೆ ಮನೆಯಲ್ಲಿ ಪ್ರತಿನಿತ್ಯ ನಡೆಯುವಂತಹ ಅಡುಗೆ ತಯಾರಿಯ ಕೆಲಸಗಳ ಬಗ್ಗೆ ವಿಸ್ತ್ರತವಾಗಿ ಮಾಹಿತಿ ಪಡೆದುಕೊಂಡರು. ಅದಮ್ಯ ಚೇತನ ಸಂಸ್ಥೆ ಸ್ಥಾಪನೆಯ ಹಿಂದೆ ದಿವಂಗತ ಅನಂತಕುಮಾರ್‌ ಅವರ ಅದಮ್ಯ ಕನಸುಗಳ ಬಗ್ಗೆ ಡಾ. ತೇಜಸ್ವಿನಿ ಅನಂತಕುಮಾರ್‌ ಗೃಹ ಸಚಿವರಿಗೆ ವಿವರಣೆ ನೀಡಿದರು. ಪ್ರತಿ ನಿತ್ಯ ಸುಮಾರು 70 ಸಾವಿರಕ್ಕೂ ಹೆಚ್ಚು ಊಟಗಳನ್ನ ಈ ಅಡುಗೆ ಮನೆಯಲ್ಲಿ ತಯಾರಿಸಲಾಗುತ್ತದೆ.

 ಈ ಪ್ರಕ್ರಿಯೆಯಲ್ಲಿ ಯಾವುದೇ ಥರಹದ ತ್ಯಾಜ್ಯ ಉತ್ಪತ್ತಿಯಾಗುವುದಿಲ್ಲ. ಹಾಗೆಯೇ, ಉಪಯೋಗಿಸಿದ ನೀರಿನ ಮರುಬಳಕೆಯನ್ನು ಮಾಡಲಾಗುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನ ಬಳಸದೇ ಅಡುಗೆ ಮಾಡುವುದು ಈ ಅಡುಗೆ ಮನೆಯ ಮತ್ತೊಂದು ವಿಶೇಷ ಎಂದು ವಿವರಿಸಿದರು. ಅವರ ಚಿಂತನೆಯ ಹಾದಿಯಲ್ಲಿಯೇ ನಾವುಗಳು ಹಸಿರು ಭಾನುವಾರ, ದೇಗುಲ ದರ್ಶನ, ಅನಂತಕುಮಾರ್‌ ಪ್ರತಿಷ್ಠಾನದ ಮೂಲಕ ಸಮಾಜ ಸೇವೆಯಂತಹ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೀವಿ. ಹಾಗೆಯೇ, ಅನಂತಕುಮಾರ್‌ ಪ್ರತಿಷ್ಠಾನದ ಮೂಲಕ ಯುವ ಜನತೆಯಲ್ಲಿ ನಾಯಕತ್ವ ಗುಣಗಳನ್ನ ಬೆಳಸುತ್ತಿರುವುದನ್ನೂ ಕೇಳಿ ಸಂತಸ ಪಟ್ಟರು. 

ನಂತರ ಅನಂತ ಸೇವಾ ಉತ್ಸವದಲ್ಲಿ ಭಾಗವಹಿಸಿ "ತೇಜಸ್‌ ಯುದ್ದವಿಮಾನ ಅಭಿವೃದ್ದಿಯ ಯಶೋಗಾಥೆ" ಎನ್ನುವ ಪುಸ್ತಕದ ಕನ್ನಡ ಅವತರಣಿಕೆಯನ್ನು ಲೋಕಾರ್ಪಣೆಗೊಳಿಸಿದರು. ಸಂಪೂರ್ಣ ಸ್ವದೇಶಿ ನಿರ್ಮಿತ ತೇಜಸ್‌ ಯುದ್ದವಿಮಾನದ ವಿನ್ಯಾಸದಲ್ಲಿ ಡಾ. ತೇಜಸ್ವಿನಿ ಅನಂತಕುಮಾರ್‌ ಅವರು ಸೇವೆ ಸಲ್ಲಿಸಿದ್ದರು, ಈ ಪುಸ್ತಕದ ಕನ್ನಡ ಅವತರಣಿಕೆಯ ಲೋಕಾರ್ಪಣೆಯ ಸಂಧರ್ಭದಲ್ಲಿ ಅವರ ಸಹದ್ಯೋಗಿಗಳು ನೆನೆಪಿಸಿಕೊಂಡರು. 

ಈ ಸಂಧರ್ಭದಲ್ಲಿ ಬಿಜೆಪಿ ರಾಜ್ಯ ಪ್ರಭಾರಿ ಅರುಣ್‌ ಸಿಂಗ್‌, ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕಂದಾಯ ಸಚಿವರಾದ ಆರ್‌ ಅಶೋಕ, ಸಹಕಾರ ಸಚಿವರಾದ ಎಸ್‌ ಟಿ ಸೋಮಶೇಖರ್‌, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಅದಮ್ಯ ಚೇತನ ಸಂಸ್ಥೆಯ ಟ್ರಸ್ಟಿಗಳಾದ ನಂದಕುಮಾರ್‌, ಪ್ರದೀಪ್‌ ಓಕ್‌, ಐಶ್ಚರ್ಯ ಅನಂತಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



                                    

Post a Comment

0 Comments