Header Ads Widget

ಯುವಕನೋರ್ವ ಡೆತ್ನೋಟ್ ಪೊಲೀಸರ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆ..!!


ಮೈಸೂರು:
ಮೈಸೂರಿನ ಫೋಟೋಗ್ರಾಫರ್ ಯುವಕನೋರ್ವ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತ ಯುವಕ ಅಭಿಷೇಕ ಎಂದು ತಿಳಿದು ಬಂದಿದೆ.ಡೆತ್ ನೋಟಲ್ಲಿ ಯುವಕ ಈ ಅವಮಾನ ಸಹಿಸಲು ಆಗ್ತಿಲ್ಲ. I AM VERY SORRY MOM DAD. ಇನ್ನೊಂದು ಜನ್ಮ ಇದ್ದರೆ ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂದು ಮೈಸೂರಿನ ಅಶೋಕಪುರಂ ಠಾಣೆ ಪೊಲೀಸರ ಹೆಸರು ಪ್ರಸ್ತಾಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗೆಳೆಯನಿಂದ ಬರಬೇಕಿದ್ದ ಸಾಲದ ಹಣ ಪಡೆಯಲು ನಾನು ಹೋಗಿದ್ದೆ. ಕೆಲವರು ಗಾಂಜಾ ಸೇವನೆ ಮಾಡಿದ್ದರು. ಆ ಸಮಯದಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಗಾಂಜಾ ಸೇವನೆ ಮಾಡಿದವರ ಜತೆಗೆ ನನ್ನನ್ನೂ ಪೊಲೀಸ್ ಠಾಣೆಗೆ ಕರೆದೊಯ್ದರು. ನೀನು ಗಾಂಜಾ ವ್ಯಸನಿ ಎಂದು ಕೀಳಾಗಿ ನೋಡಿ ಹೀಯಾಳಿಸಿದರು.

ಈ ತರಹದ ದೂರುಗಳನ್ನ ಸಹಿಸಲು ನನ್ನಿಂದ ಸಾಧ್ಯವಿಲ್ಲ. ಕೊಲೆಯಾದ ಸ್ಥಳದಲ್ಲಿ ಇದ್ದ ಮಾತ್ರಕ್ಕೆ ಯಾರೂ ಕೊಲೆಗಾರ ಆಗುವುದಿಲ್ಲ. ಅಪ್ಪ- ಅಮ್ಮ ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಡೆತ್ನೋಟ್ ಬರೆದಿಟ್ಟು ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.

 

Post a Comment

0 Comments