Header Ads Widget

Whats-App-Image-2024-05-08-at-4-44-56-PM-4

ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳಿಗೆ ಕುಟುಂಬಸ್ಥರಿಂದ ವಿಶೇಷ ವಿವಾಹ..!!


ಗುಜರಾತ್:
ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಮದುವೆಯನ್ನು, ಅವರ ಕುಟುಂಬದವರೇ ಮುಂದಾಗಿ ನಿಂತು ಮಾಡಿಸಿರುವ ಘಟನೆ ಗುಜರಾತ್​​ನ ತಾಪಿ ಜಿಲ್ಲೆಯಲ್ಲಿ ನಡೆದಿದೆ.

ನಿಜಾರ್​ ತಾಲೂಕಿನ ನೆವಾಲಾ ಎಂಬ ಗ್ರಾಮದ ಗಣೇಶ್​ ಪದ್ವಿ ಮತ್ತು ರಂಜನಾ ಪದ್ವಿ ಪರಸ್ಪರ ಪ್ರೀತಿಸುತ್ತಿದ್ದು, ತಮ್ಮಿಬ್ಬರ ಪ್ರೀತಿಯನ್ನು ಕುಟುಂಬದವರ ಎದುರು ಹೇಳಿದಾಗ ಅವರದನ್ನು ಒಪ್ಪಿಕೊಳ್ಳಲಿಲ್ಲ. ಎರಡೂ ಕುಟುಂಬಗಳು ವಿರೋಧಿಸಿದ್ದು ಜೊತೆಗೆ ಪ್ರತಿದಿನ ಎರಡೂ ಕುಟುಂಬದಲ್ಲಿ ಗಲಾಟೆ ಆಗುತ್ತಿತ್ತು. ಇದರಿಂದ ಬೇಸತ್ತ ಪ್ರೇಮಿಗಳು ಒಂದೇ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಇನ್ನು ಅವರಿಬ್ಬರು ಮೃತಪಟ್ಟ ಮೇಲೆ ಈಗ ಕುಟುಂಬದವರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ಇದೀಗ ರಂಜನಾ ಮತ್ತು ಗಣೇಶ್​ ಪ್ರತಿಮೆಯನ್ನು ತಯಾರಿಸಿ, ಆ ಗೊಂಬೆಗಳಿಗೇ ಮದುವೆ ಮಾಡಿಸಿದ್ದಾರೆ. ಎರಡೂ ಕುಟುಂಬದವರು ಸೇರಿಕೊಂಡು, ಎಲ್ಲ ಸಂಪ್ರದಾಯಗಳನ್ನೂ ನೆರವೇರಿಸಿ ರಂಜನಾ-ಗಣೇಶ್​ ಪ್ರತಿಮೆಗೆ ವಿವಾಹ ಮಾಡಿಸಿದ್ದಾರೆ.

Post a Comment

0 Comments