Header Ads Widget

Whats-App-Image-2024-05-08-at-4-44-56-PM-4

ಮಹಾರಾಷ್ಟ್ರ ಸರ್ಕಾರವು ಒಂದೇ ಒಂದು ಇಂಚು ಭೂಮಿಯನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವುದಿಲ್ಲ - ದೇವೇಂದ್ರ ಫಡ್ನವೀಸ್..!!


ನಾಗ್ಪುರ:
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರ ಸರ್ಕಾರವು ಒಂದೇ ಒಂದು ಇಂಚು ಭೂಮಿಯನ್ನು ಕರ್ನಾಟಕಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಜನರಿಗೆ ನ್ಯಾಯ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಏನು ಬೇಕಾದರೂ ಮಾಡಲಿದೆ ಎಂದರು.

ಇನ್ನು ಮಹಾರಾಷ್ಟ್ರಮತ್ತು ಕರ್ನಾಟಕ ಗಡಿ ವಿವಾದದ ವಿಷಯ ನಾಗ್ಪುರದಲ್ಲಿ ನಡೆಯುತ್ತಿರುವ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಿದ್ದು, ಪ್ರತಿಪಕ್ಷಗಳು ಈ ಸಂಬಂಧ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿದೆ. ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್, ಮೊದಲ ವಾರದಲ್ಲಿ ನಿರ್ಣಯ ಮಂಡಿಸಲಾಗುವುದು ಎಂದು ವ್ಯವಹಾರ ಸಲಹಾ ಸಮಿತಿಯಲ್ಲಿ ನಿರ್ಧರಿಸಿದರೂ ಸರ್ಕಾರ ಗಡಿ ವಿವಾದದ ನಿರ್ಣಯವನ್ನು ಏಕೆ ಮಂಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

Post a Comment

0 Comments