Header Ads Widget

Whats-App-Image-2024-05-08-at-4-44-56-PM-4

ಆಟವಾಡುತ್ತಿದ್ದ ಮಗು ದ್ವಿಚಕ್ರ ವಾಹನ ಢಿಕ್ಕಿ : 5 ವರ್ಷದ ಮಗು ಸ್ಥಳದಲ್ಲೇ ಸಾವು..!!


ಮಡಿಕೇರಿ:
ಮಡಿಕೇರಿ ಮೇಕೇರಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಆಟವಾಡುತ್ತಿದ್ದ ಮಗು ದ್ವಿಚಕ್ರ ವಾಹನ ಢಿಕ್ಕಿಯಾಗಿ ಮೃತಪಟ್ಟ ಘಟನೆ ನಡೆದಿದೆ.

ಅಲಿಝಾ ಅಸ್ಸಾಂ ಮೂಲದ ಅಸ್ಮಾ ಹಾಗು ಇದ್ರಿಸ್ ಅಲಿ ದಂಪತಿ ಪುತ್ರಿ 5 ವರ್ಷದ‌‌ ಅಲಿಝಾ ಮೃತ ಮಗು  ಎಂದು ತಿಳಿದು ಬಂದಿದೆ.ಸಂಜೆ ರಸ್ತೆ ಬದಿ ಆಟವಾಡುತ್ತಿದ್ದಾಗ ಮಗುವಿಗೆ ದ್ವಿಚಕ್ರವಾಹನ ಢಿಕ್ಕಿಯಾಗಿದೆ. ಈ ವೇಳೆ ದ್ವಿಚಕ್ರ ವಾಹನ‌ ಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿದೆ.

ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Post a Comment

0 Comments