Header Ads Widget

ಉಡುಪಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೇಸ್ ಟಿಕೇಟಿಗಾಗಿ ಪೈಪೋಟಿ : ಕಳೆದ ಬಾರಿ ಕೈಹಿಡಿಯದಿದ್ದರೂ ಆಕಾಂಕ್ಷಿಗಳ ದಂಡೇ ಇದೆ ಇಲ್ಲಿ...!!

 


ಉಡುಪಿ:
ಪ್ರಮೋದ್ ಮಧ್ವರಾಜ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬೆನ್ನಿಗೇ  ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂದು ಆರಂಭವಾದ ಚರ್ಚೆ ಚುನಾವಣೆ ಘೋಷಣೆಯಾಗುವವರೆಗೂ ನಿಲ್ಲುವ ಲಕ್ಷಣಗಳು‌ ಕಾಣುತ್ತಿಲ್ಲ. 


ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಬಯಸುವವರು ಕೆಪಿಸಿಸಿಗೆ ಅರ್ಜಿ ಹಾಕಬೇಕು ಎಂಬ ಸೂಚನೆಯ ಮೇರೆಗೆ ಉಡುಪಿ ವಿಧಾನ ಸಭಾ ಕ್ಷೇತ್ರದಿಂದ 
7 ಮಂದಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ.ಆದ್ದರಿಂದ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಬಾರಿ ಪೈಪೋಟಿಗೆ ಕಾರಣವಾಗಿದೆ.

ರಮೇಶ್ ಕಾಂಚನ್,ಕೃಷ್ಣಮೂರ್ತಿ ಆಚಾರ್ಯ,ಪ್ರಸಾದ್ ಕಾಂಚನ್,ಅಮೃತ್ ಶೆಣೈ,ಪ್ರಖ್ಯಾತ್ ಶೆಟ್ಟಿ,ಅಶೋಕ್ ಕೊಡವುರ್, ಶಂಕರ್ ಕುಂದರ್ ಇಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಇಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ಡಿಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ಮೀಟಿಂಗ್ ಕರೆದಿದ್ದಾರೆ ಎಂದು ತಿಳಿದು ಬಂದಿದೆ.

ಇಷ್ಟು ಮಂದಿಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ.ಬಿಜೆಪಿ ಅಭ್ಯರ್ಥಿಗೆ ಯಾರು ಟಕ್ಕರ್ ಕೊಡುತ್ತಾರೆ ಎಂದು ಕಾದು ನೋಡಬೇಕು.

ಪ್ರಸಾದ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ ಮತ್ತು ರಮೇಶ್ ಕಾಂಚನ್ ಅವರು ತಾವೇ ಅಭ್ಯರ್ಥಿಗಳು ಎಂದು ಬಿಂಬಿಸುವ ಪ್ರಯತ್ನ ಮುಂದುವರಿಸಿರುವಂತೆಯೇ, ಆಸ್ಕರ್ ಫೆರ್ನಾಂಡೀಸ್ ಅಭಿಮಾನಿ ಬಳಗದವರು ಇನ್ನೊಬ್ಬ ಹೊಸ ಅಭ್ಯರ್ಥಿಯ ಪರ ಲಾಬಿ‌ ನಡೆಸುತ್ತಿರುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಅಷ್ಟಾಗಿ ಪ್ರಚಾರ ಪ್ರಿಯರಲ್ಲದಿದ್ದರೂ, ಕಾಂಗ್ರೆಸ್ ಪಕ್ಷದ ತತ್ವ‌ ಸಿದ್ಧಾಂತವನ್ನು ಒಪ್ಪಿಕೊಂಡು, ಅಪ್ಪಿಕೊಂಡ ಉದ್ಯಾವರ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿವಾಕರ ಕುಂದರ್ ಇದೀಗ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.ಅವರಿಗೆ ಕೆಲವು ಕಾಂಗ್ರೆಸ್ ನ ಹಿರಿಯ ‌ಮುಖಂಡರು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರಮೇಶ್ ಕಾಂಚನ್,ಕೃಷ್ಣಮೂರ್ತಿ ಆಚಾರ್ಯ,ಪ್ರಸಾದ್ ಕಾಂಚನ್,ಅಮೃತ್ ಶೆಣೈ,ಪ್ರಖ್ಯಾತ್ ಶೆಟ್ಟಿ,ಅಶೋಕ್ ಕೊಡವುರ್, ಶಂಕರ್ ಕುಂದರ್ ಅರ್ಜಿ ಸಲ್ಲಿಸಿದ ಇಷ್ಟು ಮಂದಿಗಳ ಬಗ್ಗೆ ಸರ್ವೆ ಮಾಡಿ ಕಾಂಗ್ರೆಸ್ ಪಕ್ಷ ನಂತರ ಟಿಕೆಟ್ ನೀಡಲಿದೆ.

ಟಿಕೆಟ್ ಸಿಗದ ಅಭ್ಯರ್ಥಿಗಳು ಒಟ್ಟಾಗಿ ಕೆಲಸಮಾಡಬೇಕಿದೆ.ಆದರೆ ಇಲ್ಲಿ ಯಾರು ಸಹಕರಿಸುತ್ತಾರೆ.ಅಥವಾ ಬಂಡಾಯ ನಿಲ್ಲುತ್ತಾರೋ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೋ‌..? ಎಂದು ಕಾದುನೋಡಬೇಕು.

ಉಡುಪಿ ವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್  ಟಿಕೇಟಿಗಾಗಿ  ಪೈಪೋಟಿ ಈ ಬಾರಿ ನಡೆದಿದೆ.ಕಳೆದ ಬಾರಿ ಕೈಹಿಡಿಯದಿದ್ದರೂ ಆಕಾಂಕ್ಷಿಗಳ ದಂಡೇ ಇಲ್ಲಿ ಇದೆ.

ಕಳಕೊಂಡ  ಕ್ಷೇತ್ರದ ದಂಡನಾಯಕನೇ ಬಿಜೆಪಿ ಸೇರಿದರೂ  ಸೇನಾನಿಗಳಲ್ಲಿ ಕುಂದದ ಛಲ.ಏಳು ಜನ ದಂಡ ನಾಯಕನ ಪಟ್ಟ ಹೊರಲು ರೆಡಿಯಾಗಿದೆ.
ವರದಿ : ರೂಪೇಶ್ ಕಲ್ಮಾಡಿ....

Post a Comment

0 Comments