ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು, ಉಡುಪಿ ಜಿಲ್ಲಾ ನೂತನ ಸಮಿತಿ ನೇಮಕ : ಜಿಲ್ಲಾ ಅಧ್ಯಕ್ಷರಾಗಿ ಇಬ್ರಾಹಿಂ ಬ್ಯಾರಿ ಕೋಟ ಆಯ್ಕೆ..!!


ಉಡುಪಿ : ಕರ್ನಾಟಕ ಪ್ರೆಸ್ ಕ್ಲಬ್  (ರಿ) ಬೆಂಗಳೂರು ,  ಪತ್ರಕರ್ತ  ಸಂಘಟನೆಯ ಉಡುಪಿ ಜಿಲ್ಲೆಯ ಅಧ್ಯಕ್ಷರಾಗಿ ವಿಶ್ವ ದರ್ಶನ ಪತ್ರಿಕೆ  ವರದಿಗಾರ ಮತ್ತು ಡೈಲಿ ವಾರ್ತೆ ಸಂಪಾದಕರಾದ ಇಬ್ರಾಹಿಂ ಬ್ಯಾರಿ ಕೋಟ ಆಯ್ಕೆಯಾಗಿದ್ದಾರೆ.


ಉಪಾಧ್ಯಕ್ಷರಾಗಿ ಹೊಸಕಿರಣ ವೆಬ್ ನ್ಯೂಸ್ ಸಂಪಾದಕ ಹಾಗೂ ಶ್ರೀಗರಿ ನ್ಯೂಸ್ ಉಡುಪಿ ಜಿಲ್ಲಾ ವರದಿಗಾರ ಕಿರಣ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರೈಮ್ ಟಿವಿ ಸಂಪಾದಕರಾದ ರೂಪೇಶ್ ಕಲ್ಮಾಡಿ, ಕಾರ್ಯದರ್ಶಿ ಸ್ಮೈಲ್ ಕನ್ನಡ ಟಿವಿ ಜಿಲ್ಲಾ ವರದಿಗಾರ ರಮೇಶ್ ಮೆಂಡನ್, ಸಹ ಕಾರ್ಯದರ್ಶಿ ಪ್ರೈಮ್ ಟಿವಿ ತಾಲೂಕು ವರದಿಗಾರ ಅನಿಲ್ ಆಳ್ವ, ಖಜಾಂಚಿ ಭೀಮವಾದ ಪತ್ರಿಕೆ ಸಂಪಾದಕ ಶೇಖರ್ ಹಾವಂಜೆ, ಹಾಗೂ  ಗೌರವಾನ್ವಿತ ಸದಸ್ಯರು ಪಬ್ಲಿಕ್ ನೆಕ್ಸ್ಟ್ ವರದಿಗಾರ ದಾಮೋದರ, ಉಡುಪಿ ಲೈವ್ ಶಿಜಿತ್, ಕಹಳೆ ನ್ಯೂಸ್  ವರದಿಗಾರ ರಾಜೇಶ್ ಕುಂದಾಪುರ, ನಮ್ಮ ಕುಡ್ಲ ಟಿವಿ ಚಾನಲ್ ವರದಿಗಾರ ಜನಾರ್ದನ್ ಕೆ. ಎಮ್., ಅಕ್ಷರು ಕ್ರಾಂತಿ ನ್ಯೂಸ್ ಪುರುಷೋತ್ತಮ ಪೂಜಾರಿ ಇವರಗಳನ್ನು   ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು  ಇದರ ಉಡುಪಿ ಜಿಲ್ಲಾ ಸಮಿತಿ ಪದಾಧಿಕಾರಿಗಳಾಗಿ  ಬೆಂಗಳೂರು ಮುಖ್ಯ ಕಚೇರಿಯಲ್ಲಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಸಮಿತಿ ಸದಸ್ಯರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಭೆ  ಸೇರಿ ಉಡುಪಿ ಜಿಲ್ಲಾ  ನೂತನ ಘಟಕವನ್ನು ಅನುಮೋದನೆ ಮಾಡಿ ಅದೇಶಿಸಲಾಗಿದೆ.
ಉಡುಪಿ ಜಿಲ್ಲೆಯ ನೂತನ ಪದಾಧಿಕಾರಿಗಳಿಗೆ  ಕರ್ನಾಟಕ ಪ್ರೆಸ್ ಕ್ಲಬ್  ರಾಜ್ಯ ಸಲಹಾ ಸಮಿತಿ ಅಧ್ಯಕ್ಷ  ಡಾ.ಎಸ್.ಎಸ್.ಪಾಟೀಲ   ಹುಬ್ಬಳ್ಳಿ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.

ನೂತನ ಪದಾಧಿಕಾರಿಗಳಿಗೆ ಪತ್ರಕರ್ತರಿಗೆ ಯಾವುದೇ  ಸಮಸ್ಯೆ ಆದಾಗ ಸಹಾಯ ಸಹಕಾರ ನೀಡುವುದರ ಜೊತೆಗೆ ಬಡ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಮತ್ತು ಸದಾ ಭ್ರಷ್ಟರ ವಿರುದ್ಧ ಹೋರಾಟ ಮಾಡಿ ಬಡವರಿಗೆ , ಜನಸಾಮಾನ್ಯರಿಗೆ ನ್ಯಾಯ ಒದಗಿಸುವಂತೆ ತಿಳಿಸಿದ್ದಾರೆ.

0/Post a Comment/Comments

Previous Post Next Post