Header Ads Widget

Whats-App-Image-2024-05-08-at-4-44-56-PM-4

ಕಾರ್ಕಳ: ಕಾಂಗ್ರೇಸ್‌ ಪಕ್ಷದ ವತಿಯಿಂದ ಬೃಹತ್‌ ವಾಹನ ರ್‍ಯಾಲಿ...!!

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೇಸ್‌ ಪಕ್ಷದ ವತಿಯಿಂದ ಲೋಕಸಭಾ ಚುನಾವಣಾ ಪ್ರಯುಕ್ತ ಬೃಹತ್‌ ವಾಹನ ರ್‍ಯಾಲಿ ಪರಿವರ್ತನಾ ಜಾಥಾಕ್ಕೆ ಪುಲ್ಕೇರಿ ಬೈಪಾಸ್‌ ವೃತ್ತದಲ್ಲಿ ಚಾಲನೆ ನೀಡಲಾಯಿತು.ಮಾಜಿ ಸಚಿವ ಅಭಯಚಂದ್ರ ಜೈನ್‌ ಕಾಂಗ್ರೆಸ್‌ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.

ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ , ಕಾಂಗ್ರೆಸ್‌ ಮುಖಂಡ ಉದಯಕುಮಾರ್‌ ಶೆಟ್ಟಿ ಸಹಿತ ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ದ್ವಿಚಕ್ರ, ಲಘು ವಾಹನ ಸಹಿತ ಅನೇಕ ವಾಹನಗಳಲ್ಲಿ ಅಪಾರ ಸಂಖ್ಯೆಯ ಮಂದಿ ನಗರದ ಮುಖ್ಯ ಪೇಟೆಯಲ್ಲಿ ಸಂಚರಿಸಿ ರ್ಯಾಲಿ ಮೂಲಕ ಹೆಬ್ರಿಯಲ್ಲಿ ನಡೆಯುವ ಬೃಹತ್‌ ಕಾಂಗ್ರೆಸ್‌ ಬಹಿರಂಗ ಸಭೆಗೆ ತೆರಳಿದರು.

ಪೊಲೀಸರು ಬಿಗು ಬಂದೋಬಸ್ತ್ ಕೈಗೊಂಡಿದ್ದರು.ಶುಭದ ರಾವ್‌ ನಿರ್ವಹಿಸಿದರು.

Post a Comment

0 Comments