Header Ads Widget

Whats-App-Image-2024-05-08-at-4-44-56-PM-4

ಕಾಂಗ್ರೆಸ್ ಆಳ್ವಿಕೆಯಲ್ಲಿ ಹಿಂದುಗಳಿಗೆ ಉಳಿಗಾಲವಿಲ್ಲ : ಯಶ್ ಪಾಲ್ ಸುವರ್ಣ...!!

ಉಡುಪಿ: ಕಳೆದ 10 ತಿಂಗಳಿನಲ್ಲಿ ಕರ್ನಾಟಕದಲ್ಲಿ ಹಿಂದೂ ಸಮಾಜದ ಮೇಲೆ ನಡೆಯುತ್ತಿರುವ ನಿರಂತರ ದಾಳಿ  ಮತ್ತು ದೌರ್ಜನ್ಯಗಳನ್ನು  ಗಮನಿಸುತ್ತಿದ್ದರೆ  ಸಿದ್ದರಾಮಯ್ಯ ಆಳ್ವಿಕೆಯಲ್ಲಿ ಹಿಂದೂ ಸಮಾಜಕ್ಕೆ ಉಳಿಗಾಲ ಇಲ್ಲ ಎಂಬ ಆತಂಕ ಕಾಡುತ್ತಿದೆ  ಎಂದು ಶಾಸಕ ಯಶ್ ಪಾಲ್ ಸುವರ್ಣ  ಆತಂಕ ವ್ಯಕ್ತಪಡಿಸಿದ್ದಾರೆ.

ನೇಹಾ ಹಿರೇಮಠ್  ಎಂಬ ಹೆಣ್ಣು ಮಗಳನ್ನು  ಹತ್ಯೆ ಮಾಡಿದ ರೀತಿಯನ್ನು ಕಂಡಾಗ ರಾಜ್ಯ ಸರಕಾರ  ಕಾನೂನು ಸುವ್ಯವಸ್ಥೆಯನ್ನು  ಓಟಿಗೆ ಬೇಕಾಗಿ ಒಂದು ಸಮುದಾಯಕ್ಕೆ ಮಾರಾಟ ಮಾಡಿದಂತೆ ಕಾಣುತ್ತದೆ.

ಕಳೆದ ಹತ್ತು ತಿಂಗಳಿನಲ್ಲಿ  ಪಶ್ಚಿಮ ಬಂಗಾಳವನ್ನು ನಾಚಿಸುವ ರೀತಿಯ ಅನೇಕ ಘಟನೆಗಳು ರಾಜ್ಯದಲ್ಲಿ ನಡೆದಿವೆ. ಉಡುಪಿ ಶೌಚಾಲಯ ವಿಡಿಯೋ ಹಗರಣ, ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್, ಹನುಮಾನ್ ಚಾಲೀಸಾ ಹಾಕಿದ ಯುವಕನ ಮೇಲೆ  ಹಲ್ಲೆ, ಜೈ ಶ್ರೀ ರಾಮ್ ಘೋಷಣೆ ಕೂಗಿದ ಯುವಕರಿಗೆ ಹಲ್ಲೆ,  ನಟಿ ಹರ್ಷಿಕಾ ಪುಣಚ್ಚ ಮೇಲೆ ದಾಳಿ , ಈ ಎಲ್ಲಾ ಘಟನೆಗಳು ರಾಜ್ಯದ ಹಿಂದೂ ಸಮಾಜವನ್ನು  ಆತಂಕಕ್ಕೀಡು ಮಾಡಿದೆ 

ಚುನಾವಣಾ ಹೊಂದಾಣಿಕೆಗಾಗಿ ಎಸ್‌ಡಿಪಿಐ ಪಕ್ಷದ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದ್ದು  ರಾಜ್ಯದ ಇಸ್ಲಾಮಿಕರಣಕ್ಕೆ ಕಾಂಗ್ರೆಸ್ ಪಕ್ಷ ನೇರ ಬೆಂಬಲ ನೀಡುತ್ತಿದೆ.  ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಕಾಂಗ್ರೆಸ್ಸಿಗರು ಸಿದ್ದರಾಗಿದ್ದಾರೆ. 

ಈಗ ರಾಷ್ಟ್ರ ವಿರೋಧಿ ಇಸ್ಲಾಮಿಕ್ ಮತಾಂದ ಶಕ್ತಿಗಳಿಗೆ ಮೋದಿ ಸರಕಾರ ಮತ್ತು ರಾಷ್ಟ್ರೀಯ ತನಿಖೆ ದಳಗಳ ಸ್ವಲ್ಪ ಭಯವಿದೆ. ಆದರೆ ರಾಜ್ಯದಲ್ಲಿ  ಬಿಜೆಪಿಗೆ ನಿರೀಕ್ಷಿತ ಫಲಿತಾಂಶ ಲಭಿಸದೆ ಇದ್ದರೆ, ಈ ಸಮಾಜಘಾತಕ ಶಕ್ತಿಗಳು  ಹಿಂದೂ ಸಮಾಜದ ಮೇಲೆ ಇನ್ನಷ್ಟು ತೀವ್ರವಾಗಿ ದಾಳಿ ನಡೆಸುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ರೀತಿಯಲ್ಲಿ ಕರ್ನಾಟಕದಲ್ಲಿ ಕೂಡ ಹಿಂದುಗಳು ಹಬ್ಬ ಹರಿದಿನಗಳನ್ನು ಆಚರಿಸದ ಸ್ಥಿತಿ ನಿರ್ಮಾಣ ಆಗಬಹುದು.ಈ ಹಿನ್ನೆಲೆಯಲ್ಲಿ ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ  ಮತಕ್ಕಾಗಿ ದುಷ್ಕರ್ಮಿಗಳನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಬೇಕು ಎಂದು ಯಶ್ ಪಾಲ ಸುವರ್ಣ ಆಗ್ರಹಿಸಿದ್ದಾರೆ.

Post a Comment

0 Comments