Header Ads Widget

Whats-App-Image-2024-05-08-at-4-44-56-PM-4

ಕಂಠಪೂರ್ತಿ ಮಧ್ಯಪಾನ ಮಾಡಿ ಉಡುಪಿ ಕೋರ್ಟ್‌ಗೆ ಬಂದ ಪೊಲೀಸ್ : ಸಾರ್ವಜನಿಕರಿಂದ ಆಕ್ರೋಶ ವ್ಯಕ್ತ...!!

ಉಡುಪಿ: ಕಂಠಪೂರ್ತಿ ಮಧ್ಯಪಾನ ಮಾಡಿ  ಉಡುಪಿ ಕೋರ್ಟ್ಗೆ ಬಂದ ಪೊಲೀಸ್ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೇಜಾರಿನ  ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ವಿಚಾರಣೆ ಸಂದರ್ಭ,ಆರೋಪಿ ಪ್ರವೀಣ್ ಚೌಗುಲೆಯನ್ನ ಕರೆ ತರುತ್ತಿದ್ದ ಪೊಲೀಸ್ ತಂಡದಲ್ಲಿ  ಈ ಅಧಿಕಾರಿ ಇದ್ದಿದ್ದು ಕಂಠ ಪೂರ್ತಿ ಕುಡಿದು ಸ್ಥಳೀಯರೊಂದಿಗೆ ವಾಗ್ವಾದ ನಡೆಸುತ್ತಿದ್ದರು.

ಆರೋಪಿ ಪ್ರವೀಣ್ ಚೌಗುಲೆಯ ಬದಲು ಉಮೇಶ್ ರೆಡ್ಡಿ ಎಂದು ಹೇಳಿಕೆ ನೀಡಿತ್ತಿದ್ದಲ್ಲದೇ..ಗಾಂಜಾ ಪ್ರಕರಣದ ಆರೋಪಿಯನ್ನ ಕರೆತಂದಿದ್ದೇವೆ ಎಂದು ಮಾಧ್ಯಮದವರೊಂದಿಗೆ  ಅನುಚಿತವಾಗಿ ವರ್ತಿಸುತ್ತಿದ್ದರು.

ಇಂತಹ‌ ಗಂಭೀರ ಪ್ರಕರಣದ ಆರೋಪಿಯನ್ನ ಕರೆತರುವಾಗ ಮಧ್ಯಪಾನ ಮಾಡಿ ಬಂದ ಅಧಿಕಾರಿ ವಿರುದ್ದ ಕ್ರಮ‌ಕೈಗೊಳ್ಳುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.

Post a Comment

0 Comments