Header Ads Widget

Whats-App-Image-2024-05-08-at-4-44-56-PM-4

ಮಲ್ಪೆ: ದ್ವಿಚಕ್ರ ವಾಹನ‌ ಢಿಕ್ಕಿ ಹೊಡೆದು ಪರಾರಿ : ಬೋಟ್ ಮಾಲಕ ಮೃತ್ಯು...!!

ಮಲ್ಪೆ: ನಗರದ ಬೋಟ್ ಉದ್ಯಮಿಯೊಬ್ಬರು ರಸ್ತೆ ದಾಟುತ್ತಿರುವಾಗ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರು ಮಲ್ಪೆ ಬೋಟ್ ಮಾಲಕ ಚಂದ್ರ ಎಂದು ತಿಳಿದು ಬಂದಿದೆ.

ಚಂದ್ರ ಅವರು ಮಲ್ಪೆಯ ಅಮ್ಮಣ್ಣ ಸ್ಟೋರ್‌ ಅಂಗಡಿಯ ಎದುರು ಮಲ್ಪೆ ವಡಭಾಂಡೇಶ್ವರ ರಸ್ತೆಯಲ್ಲಿ ರಸ್ತೆ ದಾಟುವಾಗ ಅಪರಿಚಿತ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಲ್ಪೆ ಪೊಲೀಸರು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ವಿವರ:
ಮಲ್ಪೆ: ದಿನಾಂಕ 25/03/2024 ರಂದು ಸಂಜೆ 16:15 ಗಂಟೆಗೆ ಪಿರ್ಯಾದಿದಾರರ ಬೋಟಿನ ರೈಟರ್‌ ಅಕ್ಷಯ್‌ ರವರು ಪಿರ್ಯಾದಿದಾರರಾದ ಶ್ರೀನಿವಾಸ (39), ಕೊಡವೂರು ಗ್ರಾಮ ಮಲ್ಪೆ ಇವರಿಗೆ ಕರೆ ಮಾಡಿ ಕೊಡವೂರು ಗ್ರಾಮದ ಮಲ್ಪೆಯ ಅಮ್ಮಣ್ಣ ಸ್ಟೋರ್‌ ಅಂಗಡಿಯ ಎದುರು ಮಲ್ಪೆ ವಡಭಾಂಡೇಶ್ವರ ರಸ್ತೆಯಲ್ಲಿ ಪಿರ್ಯಾದಿದಾರರ ತಂದೆ ಚಂದ್ರ ರವರಿಗೆ ರಸ್ತೆ ಅಪಘಾತವಾಗಿ ಅವರು ರಸ್ತೆಗೆ ಬಿದ್ದಿದ್ದು ತೀವ್ರ ರಕ್ತ ಗಾಯವಾಗಿರುವುದಾಗಿ ವಿಚಾರ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಅಲ್ಲಿಗೆ ಹೋದಾಗ ತುಂಬಾ ಸಾರ್ವಜನಿಕರು ಸೇರಿದ್ದು, ಅವರಲ್ಲಿ ವಿಚಾರಿಸಿದಾಗ 16:06 ಗಂಟೆಗೆ ಪಿರ್ಯಾದಿದಾರರ ತಂದೆ ಚಂದ್ರ ರವರು ಮಲ್ಪೆಯ ಅಮ್ಮಣ್ಣ ಸ್ಟೋರ್‌ ನಲ್ಲಿ ಸಾಮಾನು ಖರೀದಿಸಿ ರಸ್ತೆಯ ಆ ಬದಿಯಲ್ಲಿರುವ ತರಕಾರಿ ಅಂಗಡಿಗೆ ತರಕಾರಿ ಖರೀದಿಸಲು ರಸ್ತೆ ದಾಟುತ್ತಿರುವ ಸಮಯ ವಡಬಾಂಡೇಶ್ವರ ಕಡೆಯಿಂದ ಮಲ್ಪೆ ಕಡೆಗೆ ಓರ್ವ ಅಪರಿಚಿತ ದ್ವಿಚಕ್ರ ವಾಹನ ಸವಾರನು ತನ್ನ ದ್ವಿಚಕ್ರ ವಾಹನವನ್ನು ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ತಂದೆಗೆ ಮುಂಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ತಲೆಯ ಹಿಂಭಾಗಕ್ಕೆ ತೀವ್ರ ರಕ್ತ ಗಾಯವಾಗಿದ್ದಾಗಿ ತಿಳಿಸಿದ್ದು, ಅಲ್ಲದೇ ಅಪರಿಚಿತ ದ್ವಿಚಕ್ರ ವಾಹನ ಸವಾರನು ಗಾಯಾಳುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗದೇ ವಾಹನವನ್ನು ಅಪಘಾತ ಸ್ಥಳದಲ್ಲಿ ನಿಲ್ಲಿಸದೇ ದ್ವಿಚಕ್ರ ವಾಹನ ಸವಾರನು ಪರಾರಿಯಾಗಿರುತ್ತಾನೆ. ಗಾಯಗೊಂಡಿದ್ದ ಪಿರ್ಯಾದಿದಾರರ ತಂದೆಯನ್ನು ಒಂದು ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಕೆ ಎಂ ಸಿ ಆಸ್ಪತ್ರೆ ಮಣಿಪಾಲಕ್ಕೆ ಕರೆದುಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರು ಕೂಡಲೇ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ಹೋಗಿ ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ತಂದೆಯನ್ನು ನೋಡಿದ್ದು ಅವರು ಪ್ರಜ್ಞಾ ಹೀನ ಸ್ಥಿತಿಯಲ್ಲಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2024 ಕಲಂ: 279, 338 ಐಪಿಸಿ 134 A&B IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

 

Post a Comment

0 Comments