Header Ads Widget

ಬೈಂದೂರು: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ರಾಹುಲ್ ಬಾಲಕೃಷ್ಣ ಅವರಿಗೆ ಮರವಂತೆ ಭಾಗದ ನಾಗರಿಕರಿಂದ ಭಾವಪೂರ್ಣ ಶ್ರದ್ಧಾಂಜಲಿ...!!

ಬೈಂದೂರು : ಕಳೆದ ಎರಡು ದಿನಗಳ ಹಿಂದೆ  ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟಿ ಬಳಿ  ಲಾರಿ ಮತ್ತು ಬೈಕ್ ನಡುವೆ ಸಂಬಂಧಿಸಿದ ಭೀಕರ ಅಪಘಾತದಲ್ಲಿ   ಕೆನರಾ ಬ್ಯಾಂಕ್ ಮರವಂತೆ ಶಾಖೆ ಮ್ಯಾನೇಜರ್ ಮುಂಬೈ ಮೂಲದ ನಿವಾಸಿ  ರಾಹುಲ್ ಬಾಲಕೃಷ್ಣ ರಂಖಬೈ ಸಾವನ್ನಪ್ಪಿದ್ದರು, ಅವರು ಅತ್ಯಂತ ಸರಳ ವ್ಯಕ್ತಿತ್ವ ವನ್ನು ಹೊಂದಿದ ಅವರು ಉತ್ತಮ ಸೇವೆ ನೀಡುವುದರ ಮೂಲಕ ಮರವಂತೆ  ಹಾಗೂ ಸುತ್ತಮುತ್ತಲಿನ ಜನರಲ್ಲಿ ಮೆಚ್ಚುಗೆ ಪಾತ್ರರಾಗಿದ್ದರು,

ಅವರ ದಾರುಣ ಅಕಾಲಿಕ ಸಾವಿನ ಸುದ್ದಿ ಕೇಳಿ  ಈ ಭಾಗದಲ್ಲಿ ದುಃಖದ ವಾತಾವರಣ ಮರುಗಟ್ಟಿದಂತೂ ಸತ್ಯ? ಅವರು ಕಾರ್ಯನಿರ್ವಹಿಸುತ್ತಿರುವ ಮರವಂತೆ  ಕೆನರಾ ಬ್ಯಾಂಕ್ ಶಾಖೆಯಲ್ಲಿ  ಇಂದು ಮರವಂತೆ ಭಾಗದ ನಾಗರಿಕರು ಭಾವಪೂರ್ಣ ಶ್ರದ್ಧಾಂಜಲಿ  ಮಾಡಿದರು, 
 ಅವರ ಪತ್ನಿ ಮಗು ಹಾಗೂ  ಕುಟುಂಬದವರಿಗೆ ಈ ದುಃಖ  ಬರಿಸುವ ಶಕ್ತಿ  ಶ್ರೀ ದೇವರು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

Post a Comment

0 Comments