Header Ads Widget

Whats-App-Image-2024-05-08-at-4-44-56-PM-4

ಹಿರಿಯಡಕ: ಎಂಎಸ್‌ಪಿಸಿ ಯಲ್ಲಿ ಕೋಟ್ಯಾಂತರ ರೂಪಾಯಿ ಗೋಲ್ ಮಾಲ್ : ಲೆಕ್ಕ ಪರಿಶೋಧಕಿಯ ಮೇಲೆ ಆರೋಪ...!!

ಉಡುಪಿ: ಉಡುಪಿ ಜಿಲ್ಲೆಯ ಹಿರಿಯಡಕ ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಆಗುವ ಎಮ್. ಎಸ್.ಪಿ.ಸಿ ಯ ಪ್ರಧಾನ ಕಚೇರಿಯಲ್ಲಿ ಕೋಟ್ಯಾಂತರ ರೂ. ಗೋಲ್ ಮಾಲ್ ನಡೆದಿದೆ ಎಂದು ಅದರ ಅಧ್ಯಕ್ಷರು ಮತ್ತು ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು‌ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಎಮ್ ಎಸ್ ಪಿ ಸಿ ಯಲ್ಲಿ ಲೆಕ್ಕ ಪತ್ರ ನಿರ್ವಹಣೆ ಮಾಡುವ ಭವ್ಯ ಶೆಟ್ಟಿ ಎಂಬವಳು ಅದರಲ್ಲಿ ಕೋಟ್ಯಾಂತರ ರೂಪಾಯಿ ದುರುಪಯೋಗ ಮಾಡಿಕೊಂಡಿದ್ದಾಳೆ ಎಂದು ಎಮ್ ಎಸ್ ಪಿ ಸಿ ಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಯವರು ಉಡುಪಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ದೂರು‌ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರೈಮ್ ಟಿವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ಯಾಮಲಾ ಅವರ ಬಳಿ ಮಾತಾಡಿದಾಗ, ಅವರು "ದೂರು ಬಂದದ್ದು ಹೌದು, ಅದನ್ನು ನಾವು ತನಿಖೆ ಮಾಡುತ್ತಿದ್ದೇವೆ. ತನಿಖೆ ನಂತರ ವರದಿ ನೀಡುವುದಾಗಿ" ತಿಳಿಸಿದ್ದಾರೆ.

ಎಮ್ ಎಸ್ ಪಿ ಸಿ ಯಲ್ಲಿ ಭವ್ಯ ಶೆಟ್ಟಿ ಕೋಟ್ಯಾಂತರ ರೂಪಾಯಿ ಹಗರಣ ನಡೆಸಿದ್ದಾರೆ. ಅದರಲ್ಲಿ 18 ಮಂದಿ ಸದಸ್ಯರಿದ್ದಾರೆ. ದೂರು‌ ನೀಡಿದ ಅಧ್ಯಕ್ಷರು ಮತ್ತು ಸದಸ್ಯರಿಗೆ ಭವ್ಯ ಶೆಟ್ಟಿ ಬೆದರಿಕೆ ಹಾಕಿದ್ದಾಳೆ ಎಂದು ತಿಳಿದು ಬಂದಿದೆ.ಇದರ ಮಹಿಳಾ ಸದಸ್ಯರು ಅಮಾಯಕರಾಗಿದ್ದು ಇವರನ್ನು ಭವ್ಯ ಶೆಟ್ಟಿ ದುರುಪಯೋಗ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಭವ್ಯ ಶೆಟ್ಟಿಯನ್ನು ಎಮ್ ಎಸ್ ಪಿ ಸಿ ಯ ಕೆಲಸದಿಂದ ತೆಗೆದು ಹಾಕಬೇಕು ಮತ್ತು ಆಕೆ ಕೋಟ್ಯಾಂತರ ರೂಪಾಯಿ ಹಣ ಗೋಲ್ ಮಾಲ್ ಮಾಡಿದ್ದಲ್ಲಿ ತನಿಖೆಯಾಗಿ‌, ಆಕೆಯ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿ, ತಕ್ಕ ಶಿಕ್ಷೆಯಾಬೇಕೆಂದು 18 ಮಂದಿ‌ ಸದಸ್ಯರ ಮನೆಯವರು‌ ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ‌.
 

Post a Comment

0 Comments