ಮಣಿಪಾಲ : ಉಡುಪಿ ನಗರದ ಮಣಿಪಾಲ ಠಾಣಾ ವ್ಯಾಪ್ತಿಯ ಕರಂಬಳ್ಳಿ ಸಮೀಪ ಕೋಳಿ ಅಂಕ ನಡೆಯುತ್ತಿರುವಾಗ ಪೊಲೀಸರು ದಾಳಿ ನಡೆಸಿ 13 ಮಂದಿ ಹಾಗೂ 21 ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಣಿಪಾಲ ಪೊಲೀಸರು ದಾಳಿ ನಡೆಸುವಾಗ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿಯಲಾಗಿದೆ.
ಘಟನೆ ವಿವರ:
ಮಣಿಪಾಲ: ದಿನಾಂಕ 30/01/2024 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಹುಂಜಗಳ ಕಾಲುಗಳಿಗೆ ಹರಿತವಾದ ಕೋಳಿಬಾಳು ಕಟ್ಟಿ ಒಂದಕ್ಕೊಂದು ತಿವಿದುಕೊಳ್ಳುವಂತೆ ಮಾಡಿ ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕವನ್ನು ನಡೆಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ಮಾಡಿ ಕೋಳಿ ಅಂಕ ನಡೆಸುತ್ತಿದ್ದ 1. ಚಂದ್ರಶೇಖರ, 2. ಹರೀಶ್ , 3. ಸಚಿನ್ , 4. ಯೋಗೀಶ್, 5. ನಾಗೇಶ್, 6. ಪ್ರಕಾಶ್ , 7. ಜಯ , 8. ಸುರೇಶ್ , 9. ಅನಿಲ್ , 10. ನವೀನ್, 11. ಶಾಹಿನ್, 12. ಶಂಕರ, 13. ಈಶ್ವರ ಇವರನ್ನು ವಶಕ್ಕೆ ಪಡೆದು 21 ಕೋಳಿ, ಆಟಕ್ಕೆ ಬಳಸಿದ ನಗದು ಹಣ ರೂಪಾಯಿ 2600/- ಮತ್ತು 2 ಕೋಳಿ ಬಾಳ್‌ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2024 ಕಲಂ: 87 , 93 KP Act and 11 (1)A PREVENTION OF CRUELTY TO ANIMALS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
0 Comments