ಮಂಗಳೂರು: ಕಿನ್ನಿಗೋಳಿ ಸಂಕಲಕರಿಯ ಸಮೀಪ 09/12/2023 ರಂದು ಗೆಳೆಯರ ಬಳಗ ಎಂಬ ಸಂಸ್ಥೆ ವಾಲಿಬಾಲ್ ಪಂದ್ಯಾಟ ಆಯೋಜಿಸಿದ್ದರು. ರಾತ್ರಿ 3 ಗಂಟೆ ಸುಮಾರಿಗೆ ಮುಂಡ್ಕೂರು ನಿವಾಸಿ ಹರೀಶ್ ಎಂಬ ಅಮಾಯಕನಿಗೆ ಕಾರಿಗೆ ದಾರಿ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕಾರು ಪುಡಿಗೈದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆ ನಡೆಸಿದವರು ಸುರತ್ಕಲ್ ನ ವ್ಯಕ್ತಿಯೊಬ್ಬ ಮತ್ತು ಸಹಚರರು ಎಂದು ತಿಳಿದುಬಂದಿದೆ.
ಪಂದ್ಯಾಟ ವೀಕ್ಷಿಸಲು 1 ಗ್ರೇ ಬಣ್ಣದ ಇನ್ನೋವಾ, 1 ಕೆಂಪು ಬಣ್ಣದ ಸ್ವಿಫ್ಟ್, ಮತ್ತು 4 ಬೈಕ್ ಗಳಲ್ಲಿ ಗುಂಪು ಕಟ್ಟಿಕೊಂಡು ವ್ಯಕ್ತಿಯೊಬ್ಬ ಮತ್ತು ಆತನ ಟೀಮ್ ಬಂದಿತ್ತು ಎನ್ನಲಾಗಿದೆ. 3 ಗಂಟೆಯ ಸುಮಾರಿಗೆ ಅಲ್ಲಿಂದ ಹೊರಟಾಗ ಅಮಾಯಕ ಹರೀಶ್ ಎಂಬಾತ ಇವರ ಕಾರಿಗೆ ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಈ ತಂಡ, ಹರೀಶ್ ಅವರಿಗೆ ಹಲ್ಲೆ ನಡೆಸಿ, ಅವರ ಕಾರನ್ನು ಪುಡಿ ಮಾಡಿದ್ದಾರೆ.
ಈ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಅಮಾಯಕನಿಗೆ ಹಲ್ಲೆ ಮಾಡಿದ ವ್ಯಕ್ತಿ ಹಾಗೂ ಆತನ ತಂಡದ ವಿರುದ್ಧ ದೂರು ದಾಖಲಾಗಬೇಕು, ಈ ಘಟನೆ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
0 Comments