Header Ads Widget

ಬಸ್ ಹಾಗೂ ಜೀಪು ನಡುವೆ ಢಿಕ್ಕಿ : ಓರ್ವ ಮೃತ್ಯು : ಹಲವರಿಗೆ ಗಾಯ...!!

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿಟ್ಟೆ ಮಂಜಲ್ಪಾಕೆ ಎಂಬಲ್ಲಿ  ಖಾಸಗಿ ಬಸ್‌ ಹಾಗೂ ಜೀಪು ನಡುವೆ ಢಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಓವರ್ ಟೇಕ್ ಮಾಡುವ ಸಂದರ್ಭ ಘಟನೆ ಸಂಭವಿಸಿದ್ದು,  ಜೀಪಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಓರ್ವರಿಗೆ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜೀಪಿನಲ್ಲಿದ್ದವರು ಸ್ಥಳಿಯ ದೈವದ ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಸ್ಸಾಗುತಿದ್ದರು ಎನ್ನಲಾಗಿದೆ.

ಗಾಯಾಳುಗಳನ್ನು  108 ಆಂಬುಲೆನ್ಸ್‌ ನಲ್ಲಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.

ಈ ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Post a Comment

0 Comments