ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಬನಶಂಕರಿ ಬಳಿಯ ನಿವಾಸಿ ಖಾಸಗಿ ಬಸ್ಸಿನ ಮಾಲೀಕ ಶಿವಪ್ರಸಾದ್ ಈತನ ಮೇಲೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಪರಸ್ತ್ರೀ ಯೊಂದಿಗೆ ಅಕ್ರಮ ಸಂಬಂಧದ ವಿರುದ್ಧ ಈತನ ಪತ್ನಿ ದೂರು ನೀಡಿದ್ದಾರೆ.
ಆರೋಪಿ ಶಿವಪ್ರಸಾದ್ ಹಲವು ವರ್ಷಗಳಿಂದ ಹೆಬ್ರಿ ಪರಿಸರದಲ್ಲಿ ಖಾಸಗಿ ಬಸ್ಸಿನಲ್ಲಿ ಚಾಲಕ ಹಾಗೂ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಸ್ವತ ಒಂದು ಬಸ್ಸಿನ ಮಾಲಕನಾಗಿದ್ದಾನೆ. ಈತ 2014ರಲ್ಲಿ ಮಂಜುಳಾ ಈಕೆಯನ್ನು ಮದುವೆಯಾಗಿದ್ದು ಈತನಿಗೆ ಎರಡು ಗಂಡು ಮಕ್ಕಳಿದ್ದಾರೆ. ಮದುವೆ ಸಮಯದಲ್ಲಿ ಹೆಂಡತಿ ಮನೆಯವರಿಂದ ಚಿನ್ನಾಭರಣಗಳ ರೂಪದಲ್ಲಿ ವರದಕ್ಷಿಣೆ ಬೇಡಿಕೆ ಇಟ್ಟಿದ್ದು. ಹೆಂಡತಿ ಮನೆಯವರು ಚಿನ್ನಾಭರಣಗಳನ್ನು ನೀಡಿದ್ದು ಅಲ್ಲದೆ ಮದುವೆಯ ಖರ್ಚು ನೋಡಿಕೊಂಡಿರುತ್ತಾರೆ.
ನಂತರ ಈತ ಬಸ್ಸು ಲೀಸಿಗೆ ಪಡೆಯಲು ಎಲ್ಲಾ ಚಿನ್ನವನ್ನು ಅಡವಿರಿಸಿದ್ದು ಹಾಗೂ ವಿವಿಧ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಪಡೆದುಕೊಂಡಿರುತ್ತಾನೆ. ಆದರೆ ಈತ ತನ್ನ ಕೈ ಹಿಡಿದ ಹೆಂಡತಿಗೆ ಮೋಸ ಮಾಡಿ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡು. ಮಂಜುಳಾ ಹಾಗೂ ತನ್ನ ಮಕ್ಕಳಿಗೆ ಖರ್ಚಿಗೆ ಹಣವನ್ನು ನೀಡದೆ ಹಿಂಸೆಯನ್ನು ಕೊಡುತ್ತಿದ್ದ. ಶಿವಪ್ರಸಾದನ ಮತ್ತೊಂದು ಮುಖ ಲಾಕ್ಡೌನ್ ಸಮಯದಲ್ಲಿ ತನ್ನ ಹೆಂಡತಿಗೆ ಕೊಲ್ಲುವ ಮತ್ತು ಬೆಲ್ಟಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿ, ಅಸಹಜವಾಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡಿ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಪತ್ನಿ ಮಂಜುಳಾ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ಪತಿ ಶಿವಪ್ರಸಾದ್ ತಲೆಮರಿಸಿಕೊಂಡಿದ್ದು ಪೊಲೀಸರು ಆತನ ಪತ್ತೆಗಾಗಿ ಬಲೇಬಿಸಿದ್ದಾರೆ.
0 Comments