Header Ads Widget

ಪುತ್ತೂರು: ಸಮೀರ್ ಎಂಬಾತನ ವಿರುದ್ಧ ದೇವರ ಮೊರೆ ಹೋದ ಪೋಷಕರು....!!

ಪುತ್ತೂರು : ಹಿಂದೂತ್ವದ ಭದ್ರಕೋಟೆ ದಕ್ಷಿಣ ಕನ್ನಡದಲ್ಲಿ ಲವ್ ಜಿಹಾದ್ ಇನ್ನೂ ಜೀವಂತವಿದೆ ಎನ್ನಲಾಗಿದೆ. ಇಂತಹುದೇ ಪ್ರಕರಣ ಪುತ್ತೂರಿನಲ್ಲಿ ಬೆಳಕಿಗೆ ಬಂದಿದ್ದು ಹಿಂದೂ ಹುಡುಗಿಯ ಪೋಷಕರು ಈಗ ನ್ಯಾಯಕ್ಕಾಗಿ ದೇವರ ಮೊರೆ ಹೋಗಿದ್ದಾರೆ.

ಹತ್ತೂರ ಓಡೆಯ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಗೆ ದೂರಿನ ಚೀಟಿ ಬರೆದು ಹಾಕಿರುವ ಯುವತಿಯ ಪೋಷಕರು ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ.

ಸಮೀರ್ ನಿಂದಾಗಿ ನನ್ನ ಮಗಳ ಜೀವನ ಹಾಳಾಗಿದೆ ಇವತ್ತು ನಾನು ನನ್ನ ಮಗಳು ಬೀದಿಯಲ್ಲಿ ಇದ್ದೇವೆ. ನಮ್ಮ ಜೀವನ‌ ಹಾಳು ಮಾಡಿದ ಸಮೀರ್ ನ ಜೀವನ ಕೂಡ ಹಾಳಾಗಬೇಕು. ಸಮೀರ್ ನಿಗೆ ಮದುವೆ ಆಗಲು ಹುಡುಗಿ ಸಿಗಬಾರದು ಓ ದೇವರೇ ಇದು ನನ್ನ ಪ್ರಾರ್ಥನೆ ಎಂದು ಯುವತಿಯ ಅಸಹಾಯಕ ಪೋಷಕರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವರ ಹುಂಡಿಗೆ ಚೀಟಿ ಬರೆದು ಹಾಕಿ ಪ್ರಾರ್ಥನೆ ಮಾಡಿದ್ದಾರೆ.

ದೇವಳದ ಕಾಣಿಕೆ ಹುಂಡಿಯ ಲೆಕ್ಕ ನಡೆಯುತ್ತಿದ್ದ ಸಂದರ್ಭ ಈ ದೂರಿನ ಚೀಟಿ ಪತ್ತೆಯಾಗಿದ್ದು, ಇದೀಗ ಈ ಚೀಟಿ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

Post a Comment

0 Comments