Header Ads Widget

ಅಜೆಕಾರು: ಯುವಕನ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪತ್ನಿಯ ಇನ್ಸ್ಟಾಗ್ರಾಮ್ ಲವ್ ಗೆ ಬಲಿಯಾದ ಪತಿ : ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ ಅರೆಸ್ಟ್ ...!!

ಕಾರ್ಕಳ:  ಮರ್ಣೆ ಗ್ರಾಮದ ಅಜೆಕಾರಿನ‌ ದೆಪ್ಪುತ್ತೆ ನಿವಾಸಿ ಬಾಲಕೃಷ್ಣ ಪೂಜಾರಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮನೆಗೆ ಕರೆತಂದ ರಾತ್ರಿಯೇ ಮೃತಪಟ್ಟ ಪ್ರಕರಣದ ಕುರಿತು ಸಂಬಂಧಿಕರಲ್ಲಿ ಸಾವಿನ ಕುರಿತು ಅನುಮಾನ ವ್ಯಕ್ತವಾಗಿತ್ತು. 

ಈ ಪ್ರಕರಣದ ತನಿಖೆ ನಡೆಸುವಂತೆ ಯುವಕನ ತಂದೆಯೇ ಅಜೆಕಾರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಬಾಲಕೃಷ್ಣ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದ್ದು ಪತ್ನಿ‌ ಹಾಗೂ ಆಕೆಯ ಪ್ರಿಯಕರ ಸೇರಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಮೃತಪಟ್ಟ ಬಾಲಕೃಷ್ಣ ಪೂಜಾರಿ ಪತ್ನಿ ಪ್ರತಿಮಾ(36) ಹಾಗೂ ಆಕೆಯ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ(28) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಇನ್ಟ್ಟಾಗ್ರಾಮ್ ಲವ್ : ಸ್ಟೇಷನ್ ಮೆಟ್ಟಿಲೇರಿದ್ದ ಮಡದಿಯ ಪ್ರೇಮ ಕಹಾನಿ....! ಬಾಲಕೃಷ್ಣ ಪೂಜಾರಿ ತಾನು ಕ್ಯಾಂಟೀನಿನಲ್ಲಿ ದುಡಿಯುತ್ತಿದ್ದರೂ ಪತ್ನಿ ಹಾಗೂ ಮಕ್ಕಳಿಗೆ ಏನೂ ಕಡಿಮೆ ಮಾಡಿರಲಿಲ್ಲ. ಅಜೆಕಾರಿನಲ್ಲಿ ಪ್ರತಿಮಾಸ್ ಮೇಕ್’ ಓವರ್ ಎನ್ನುವ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಪ್ರತಿಮಾ ಫೇಸ್ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ಸದಾ ಬ್ಯುಸಿಯಾಗಿರುತ್ತಿದ್ದಳು. ರೀಲ್ಸ್ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ ಆರೋಪಿ ಪ್ರತಿಮಾ ಫೇಸ್‍ಬುಕ್ ಹಾಗೂ ಇನ್ಟ್ಟಾಗ್ರಾಮ್ ನಲ್ಲಿ ‘ಪ್ರತಿ ಮೇಕ್’ ಓವರ್’ ಎಂಬ ಪೇಜ್ ತೆರೆದು ತನ್ನ ಡಿಫರೆಂಟ್ ರೀಲ್ಸ್’ಗಳನ್ನು ಅಪಲೋಡ್ ಮಾಡುತ್ತಿದ್ದಳು. ಈ ನಡುವೆ ಪ್ರತಿಮಾಳಿಗೆ ಇನ್ಟ್ಟಾಗ್ರಾಮ್ ಮೂಲಕ ಕಾರ್ಕಳದ ಹೊಟೇಲ್ ಹಾಗೂ ಲಾಡ್ಜಿಂಗ್ ಮಾಲಕನ ಪುತ್ರ ದಿಲೀಪ್ ಹೆಗ್ಡೆ ಎಂಬಾತ ಸ್ನೇಹವಾಗಿದೆ. ಆರಂಭದಲ್ಲಿ ಪರಿಚಯ ಬಳಿಕ ಇದು ತೀರಾ ಸಲುಗೆಯ ಮಟ್ಟಕ್ಕೆ ಬೆಳೆದು ಇಬ್ಬರ ನಡುವೆ ಅನೈತಿಕ ಸಂಬಂಧಕ್ಕೂ ಕಾರಣವಾಯಿತು. ಪತ್ನಿಯ ಕಳ್ಳಾಟದ ವಿಷಯ ತಿಳಿಯುತ್ತಿದ್ದಂತೆಯೇ ಪತಿ ಬಾಲಕೃಷ್ಣ ಪೂಜಾರಿ ಮಾನಸಿಕವಾಗಿ ಕುಗ್ಗಿದ್ದರು. ಈ ವಿಷಯವನ್ನು ಪತ್ನಿಯ ಅಣ್ಣನ ಗಮನಕ್ಕೆ ತಂದಿದ್ದರು. ಬಳಿಕ ಇವರಿಬ್ಬರ ಲವ್ ಕಹಾನಿ ಅಜೆಕಾರು ಪೊಲೀಸ್ ಠಾಣೆಗೂ ಹೋಗಿತ್ತು. ಬಳಿಕ ಇಬ್ಬರನ್ನು ಕರೆಸಿ ಮುಚ್ಚಳಿಕೆ ಬರೆಯಿಸಿ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದರು ಎಂದು ಪ್ರತಿಮಾ ಅಣ್ಣ ಸಂದೀಪ್ ಅವರು ನಡೆದಿದ್ದ ಘಟನೆಯನ್ನು ವಿವರಿಸಿದ್ದಾರೆ.  

ಪ್ರಕರಣದ ವಿವರ : ಮೃತ ಬಾಲಕೃಷ್ಣ ಪೂಜಾರಿ ಹಾಗೂ ಅವರ ಪತ್ನಿ ಪ್ರತಿಮಾ‌ ತಮ್ಮ ಇಬ್ಬರು ಮಕ್ಕಳ ಜತೆ ಅನ್ಯೋನವಾಗಿದ್ದರು. ಮದುವೆಯಾದ ಬಳಿಕ ಬಾಲಕೃಷ್ಣ ಪೂಜಾರಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಮುಂಬಯಿನಲ್ಲಿ ನೆಲೆಸಿದ್ದರು. ಕೋವೀಡ್ ಬಳಿಕ ಊರಿಗೆ ಬಂದು ಜೀವನ ನಿರ್ವಹಣೆಗೆಂದು ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಟೀನ್ ನಡೆಸುತ್ತಿದ್ದರು. ಪತ್ನಿ ಮಕ್ಳಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಬಾಲಕೃಷ್ಣ ಕಳೆದ ನವೆಂಬರ್ ನಲ್ಲಿ ಹೊಸ ಮನೆಯನ್ನೂ ಕಟ್ಟಿಸಿದ್ದರು. ಬಳಿಕ ಪತ್ನಿ ಪ್ರತಿಮಾಳಿಗೆ ಅಜೆಕಾರಿನಲ್ಲಿ ಬ್ಯೂಟಿ ಪಾರ್ಲರ್ ಹಾಕಿಸಿಕೊಟ್ಟಿದ್ದರು. ತಾನು ಕ್ಯಾಂಟೀನಲ್ಲಿ ದುಡಿಯುತ್ತಿದ್ದರೂ ಪತ್ನಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ‌

ಬಾಲಕೃಷ್ಣ (44) ರವರಿಗೆ ಕಳೆದ 25 ದಿನಗಳಿಂದ ಜ್ವರ ಮತ್ತು ವಾಂತಿ ಶುರುವಾಗಿದ್ದು ಈ ಬಗ್ಗೆ ಇವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳದ ರೋಟರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರಿಕ್ಷಿಸಿದ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ ಮೇರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆ ಮಣಿಪಾಲ, ಮಂಗಳೂರು ವೆನ್ಲಾಕ್‌ ಆಸ್ಪತ್ರೆ, ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದು, ಗುಣಮುಖರಾಗದ ಕಾರಣ ದಿನಾಂಕ 19/10/2024 ರಂದು ರಾತ್ರಿ ಮನೆಗೆ ಕರೆತಂದಿರುತ್ತಾರೆ. ದಿನಾಂಕ 20/10/2024 ರಂದು ಬೆಳಗಿನ ಜಾವ 3:30 ಗಂಟೆಗೆ ಬಾಲಕೃಷ್ಣ ರವರು ಮೃತಟ್ಟಿರುತ್ತಾರೆ. ಬಾಲಕೃಷ್ಣ ರವರ ಹೆಂಡತಿ ಪ್ರತಿಮಾಳಿಗೆ ಈ ಮೊದಲು ಹಿರ್ಗಾನದ ದಿಲೀಪ ಎಂಬಾತನ ಜೊತೆ ಗೆಳೆತನ ಇದ್ದು, ಬಾಲಕೃಷ್ಣರು ಒಮ್ಮೆಲೆ ಅಸೌಖ್ಯ ಉಂಟಾಗಿ ಮೃತಪಟ್ಟಿದ್ದರಿಂದ ಸಂಶಯದಿಂದ ಪ್ರತಿಮಳ ಅಣ್ಣ ಸಂದೀಪನು ಪ್ರತಿಮಳಲ್ಲಿ ಪದೇ ಪದೇ ವಿಚಾರಿಸಿದ್ದು, ಈ ಸಮಯ ಪ್ರತಿಮಳು ಅವಳ ಮತ್ತು ದಿಲೀಪ ಅವರ ಗೆಳೆತನಕ್ಕೆ ಅಡ್ಡ ಬರುತ್ತಿದ್ದ ಬಾಲಕೃಷ್ಣನನ್ನು ಕೊಲೆ ಮಾಡಲು ಯೋಚಿಸಿ ಅವರು ಮಾತನಾಡಿಕೊಂಡು ತಾನು ಹೇಳಿದಂತೆ ದಿಲೀಪ ಹೆಗ್ಡೆಯು ಯಾವುದೋ ವಿಷ ಪದಾರ್ಥ ತಂದು ಇದನ್ನು ಬಾಲಕೃಷ್ಣನಿಗೆ ಊಟದಲ್ಲಿ ಹಾಕಿ ಕೊಡು ಅವನು ನಿಧಾನವಾಗಿ ಸಾಯುತ್ತಾನೆ ಎಂದು ಹೇಳಿ ತನಗೆ ಕೊಟ್ಟಿದ್ದು, ಇದನ್ನು ನಾನು ಅವರಿಗೆ ಊಟದಲ್ಲಿ ಹಾಕಿ ಕೊಟ್ಟಿರುತ್ತೇನೆ. ನಂತರ ಬಾಲಕೃಷ್ಣರಿಗೆ ಅಸೌಖ್ಯ ಉಂಟಾಗಿದ್ದು, ನಾನು ಹೇಳಿದಂತೆ ದಿನಾಂಕ 20/10/2024 ರಂದು ಬೆಳಗಿನ ಜಾವ 01:30 ಗಂಟೆಗೆ ದಿಲೀಪನು ನಮ್ಮ ಮನೆಗೆ ಬಂದಿದ್ದು, ನಾವಿಬ್ಬರು ಸೇರಿ ಅಲ್ಲಿಯೆ ಇದ್ದ ಬೆಡ್‌ಶೀಟ್‌ನ್ನು ಬಾಲಕೃಷ್ಣರ ಮುಖಕ್ಕೆ ಒತ್ತಿ ಹಿಡಿದು ಅವರನ್ನು ಕೊಲೆ ಮಾಡಿರುತ್ತೇವೆ ಎಂದು ಹೇಳಿರುವುದಾಗಿ ನೀಡಿದ ದೂರಿನಂತೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

Post a Comment

0 Comments