Header Ads Widget

ಕುಂದಾಪುರ ತಾಲೂಕು ಕಚೇರಿ ಆವರಣದಲ್ಲಿ ಹೊಡೆದಾಟ : ತಹಸಿಲ್ದಾರ್ ಮಧ್ಯ ಪ್ರವೇಶ...!!

ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕಚೇರಿ ಆವರಣದಲ್ಲಿ  ಇಬ್ಬರು ವ್ಯಕ್ತಿಗಳ ಮಧ್ಯೆ ಜಾಗದ ವಿಷಯದಲ್ಲಿ ಒಬ್ಬರ ಮೇಲೆ ಒಬ್ಬರು ಗುದ್ದಾಟ ತಳ್ಳಾಟದ ಘಟನೆ ನಡೆದಿದೆ, 

ಬುಧವಾರ ಬೆಳಿಗ್ಗೆ 11 ಗಂಟೆಗೆ  ತಹಸಿಲ್ದಾರ್ ಕಚೇರಿಯ ಪಕ್ಕದಲ್ಲಿ ಏಕಾಏಕಿ ಒಬ್ಬರಿಗೊಬ್ಬರು ಗಟ್ಟಿ ಧ್ವನಿಯಲ್ಲಿ ಮಾತಿಗೆ ಮಾತು ಬೆಳೆದು ಹೊಡೆದಾಟ ಸಂಭವಿಸಿದೆ.

ತಕ್ಷಣ ತಹಸಿಲ್ದಾರ್ ಶೋಭಾ ಲಕ್ಷ್ಮಿ ಯವರು ಆಗಮಿಸಿ ಗಲಾಟೆ ಮಾಡಿಕೊಂಡವರನ್ನು ಕಚೇರಿಯ ಕಾಂಪೌಂಡಿನ ಹೊರಗಡೆ ಹೋಗುವಂತೆ ಆದೇಶಿಸಿದರು.

ಘಟನೆಯ ವಿಷಯ ನಿನ್ನಷ್ಟೇ ತಿಳಿಯಬೇಕಾಗಿದೆ, ಸ್ಥಳಕ್ಕೆ ಕುಂದಾಪುರ ಪೊಲೀಸರು ಆಗಮಿಸಿದ್ದಾರೆ, ಪ್ರಕರಣದ ತಿರುವು ಯಾವ ಕಡೆಗೆ ತಿರುಗುತ್ತದೆ ಎಂದು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.

Post a Comment

0 Comments