Header Ads Widget

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ : ಹೈ ಕೋರ್ಟ್ ತೀರ್ಪು ಪ್ರಕಟ : ಹೋರಾಟಗಾರರಿಗೆ ನಿರಾಸೆ...!!

ಮಂಗಳೂರು: ದೇಶದಲ್ಲೇ ಭಾರೀ ಸಂಚಲನ ಮೂಡಿಸಿ ಇನ್ನೂ ನಿಗೂಢವಾಗಿ ಉಳಿದ ಸೌಜನ್ಯ ಪ್ರಕರಣದ ಹೈಕೋರ್ಟ್ ತೀರ್ಪು ಹೊರಬಿದ್ದಿದೆ. ಸೌಜನ್ಯ ಕೊಲೆಯಾಗಿ 12 ವರ್ಷ ಆದರೂ ಇಂದು ನ್ಯಾಯ ಸಿಕ್ಕಿಲ್ಲ.

ಈ ಹಿಂದೆ ನಡೆದ ತನಿಖೆಗಳಲ್ಲಿ ಸೌಜನ್ಯಗಳಿಗೆ ಸರ್ಕಾರದ ಅಂಗ ಸಂಸ್ಥೆಗಳೇ ಅನ್ಯಾಯ ಮಾಡಿದ್ದವು. ಹೀಗಾಗಿ ಸೌಜನ್ಯ ಮರುತನಿಗೆ ಮಾಡಬೇಕು ಎನ್ನುವ ಹಕ್ಕೋತ್ತಾಯ ಜನರಿಂದ ಮೂಡಿಬಂದಿತ್ತು. ಈ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದ ಹೋರಾಟಗಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ತೀರ್ಪು ನೀಡಿದೆ. ಸೌಜನ್ಯ ಪ್ರಕರಣವನ್ನು ಮರುತನಿಖೆ ಮಾಡಲು ಆಗುವುದಿಲ್ಲ ಎಂದು  ಹೈಕೋರ್ಟ್ ಹೇಳಿದೆ. ಈ ಮೂಲಕ ಸೌಜನ್ಯಾ ಪೋಷಕರು ಸಲ್ಲಿಸಿದ ಅರ್ಜಿ ವಜಾ ಆಗಿದೆ.

ಸೌಜನ್ಯ ಪ್ರಕರಣದ ಪ್ರಾರಂಭದಿಂದಲೂ ಮಹೇಶ್ ಶೆಟ್ಟಿ ತಿಮರೋಡಿ, ಸಂತಸ್ಥ ಕುಟುಂಬದ ಬೆನ್ನಿಗೆ ನಿಂತಿದ್ದಾರೆ.
ಕಾಲದಿಂದ ಕಾಲಕ್ಕೆ ಹೊಸ ಹೊಸ ಹೋರಾಟಗಾರರು ಸೌಜನ್ಯ ಪರ ಹೋರಾಟದ ಉದ್ದೇಶಕ್ಕೆ ಬಲ ತುಂಬಿದ್ದು, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಈ ಪೈಕಿ ಪ್ರಮುಖ ಹೆಸರು. ಇವರೆಲ್ಲರ ಪ್ರಯತ್ನದ ಫಲವಾಗಿ ಸೌಜನ್ಯ ಪ್ರಕರಣ ಮರು ತನಿಖೆಗೆ ಹೋಗಬೇಕು ಎಂದು ಕೋರ್ಟ್ ಮೆಟ್ಟಲು ಹತ್ತಿದ್ದರು. ಆದರೆ ಕೋರ್ಟ್ ಇದೀಗ ಸೌಜನ್ಯ ಹೋರಾಟಗಾರರಿಗೆ ನಿರಾಸೆ ಮೂಡಿಸಿದೆ.

Post a Comment

0 Comments