ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ಅಂಗಡಿಗೆ ತೆರಳಿದ್ದ ಬಾಲಕಿ ಮೇಲೆ ಅಂಗಡಿ ಮಾಲೀಕ ಅಶ್ರಫ್ ಎನ್ನುವಾತ ಲೈಂಗಿಕ ದೌರ್ಜನ್ಯ ವೆಸಗಿದ ಹೀನಾಯ ಕೃತ್ಯ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಅಂಗಡಿಗೆ ಬಾಲಕಿ ತೆರಳಿದ ವೇಳೆ ಅಂಗಡಿಯ ಮಾಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆಯೂ ಈತ ಅಂಗಡಿಗೆ ಬಂದ ಹಲವಾರು ಮಹಿಳೆಯರೊಂದಿಗೆ ಇದೆ ರೀತಿ ವರ್ತಿಸಿದ ಎನ್ನುವ ಆರೋಪ ಕೇಳಿಬಂದಿದೆ. ಮಾಹಿತಿ ತಿಳಿದ ಕೊಡಲೇ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಘಟನೆಯನ್ನು ಖಂಡಿಸಿದ್ದು ಆರೋಪಿಯನ್ನು ತಕ್ಷಣ ಬಂಧಿಸುವಂತೆ ವಿಟ್ಲ ಪೊಲೀಸರಿಗೆ ಅಗ್ರಹಿಸಿದ್ದಾರೆ. ಸಿ.ಸಿ.ಕ್ಯಾಮರಾ ದೃಶ್ಯಗಳು ಪೋಲಿಸರಿಗೆ ದೊರಕಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರೆ.
0 Comments