Header Ads Widget

ಅದ್ದೂರಿಯಾಗಿ ನಡೆದ ತರುಣ್ ಸುಧೀರ್ ಹಾಗೂ ಸೋನಲ್ ಅರಿಶಿಣ ಶಾಸ್ತ್ರ...!!

ಬೆಂಗಳೂರು: ಕನ್ನಡ ಸಿನಿಮಾರಂಗದ ಸ್ಟಾರ್ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮೊದಲು ಅದ್ದೂರಿಯಾಗಿ ಅರಿಶಿಣ ಶಾಸ್ತ್ರಗಳನ್ನು ಮಾಡಿಕೊಂಡಿದ್ದಾರೆ.

ಅರಿಶಿಣದ ನೀರನ್ನು ಹೊಯ್ದುಕೊಂಡು ಫೋಟೋಗೆ ತರುಣ್ ಹಾಗೂ ಸೋನಲ್ ಪೋಸ್ ಕೊಟ್ಟಿದ್ದಾರೆ. ಆಗಸ್ಟ್ 10ರಂದು ಬೆಂಗಳೂರಲ್ಲಿ ಆರತಕ್ಷತೆ ಜರುಗಲಿದೆ. ಆಗಸ್ಟ್ 11ರಂದು ಇವರ ವಿವಾಹ ನೆರವೇರುತ್ತಿದೆ.

ಸೋನಲ್ ಅವರು ಮಂಗಳೂರಿನವರು. ಅವರು ಮೊದಲು ತಮಿಳು ಸಿನಿಮಾದಲ್ಲಿ ನಟಿಸಿದ್ದರು. ಆನ್ಲೈನ್ನಲ್ಲಿ ಇರುವ ಮಾಹಿತಿ ಪ್ರಕಾರ ಅವರು ಜನಿಸಿದ್ದು 1995ರ ಆಗಸ್ಟ್ 11ರಂದು. ಕೆಲವೇ ದಿನಗಳಲ್ಲಿ 29 ವರ್ಷ ತುಂಬಲಿದೆ. ತರುಣ್ ಸುಧೀರ್ ಅವರಿಗೆ 41 ವರ್ಷ ಎನ್ನಲಾಗಿದೆ. ಈಗ ಅವರು ಜನಿಸಿದ್ದು 1983ರಲ್ಲಿ. ಅಂದರೆ, ಇಬ್ಬರ ಮಧ್ಯೆ ಸುಮರು 12 ವರ್ಷಗಳ ಅಂತರ ಇದೆ.

Post a Comment

0 Comments