Header Ads Widget

ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ನಡುವೆ ಪ್ರೀತಿ : ತಂಗಿಯ ಕತ್ತು ಹಿಸುಕಿ ತಂಗಿಯ ಕೊಂದ ಅಣ್ಣ..!!

ಉತ್ತರ ಪ್ರದೇಶ: ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದ ತಂಗಿಯನ್ನು ಮುಸ್ಲಿಂ ಯುವಕನೋರ್ವ ನಡುರಸ್ತೆಯಲ್ಲೇ ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನ ನಗ್ಲಾ ಶೇಕು ಗ್ರಾಮದಲ್ಲಿ ಸಂಭವಿಸಿದೆ.

ನಡುರಸ್ತೆಯಲ್ಲೇ ಆತ ತಂಗಿಯ ಕತ್ತು ಹಿಸುಕಿದರು ಯಾರೊಬ್ಬರೂ ಬಾಲಕಿಯ ಸಹಾಯಕ್ಕೆ ಬಾರದೇ ಘಟನೆಯನ್ನು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಂತಿದ್ದಾರೆ. 

20 ವರ್ಷದ ಹಸೀನ್ ಎಂಬಾತನೇ ಹೀಗೆ ತನ್ನ 16 ವರ್ಷದ ಸೋದರಿಯನ್ನು ಕತ್ತು ಹಿಸುಕಿ ಕೊಂದ ಯುವಕ ಎಂದು ಗುರುತಿಸಲಾಗಿದೆ ಮ

16 ವರ್ಷದ ಬಾಲಕಿ ಹಿಂದೂ ಹುಡುಗನನ್ನು ಪ್ರೀತಿಸುತ್ತಿರುವ ವಿಚಾರ ತಿಳಿದ ಆಕೆಯ ಕುಟುಂಬದವರು ಆಕೆಗೆ ಸ್ವ ಸಮುದಾಯದ ಬೇರೊಬ್ಬ ವ್ಯಕ್ತಿಯ ಜೊತೆ ವಿವಾಹ ನಿಶ್ಚಯ ಮಾಡಿದ್ದರು. ಆದರೆ ಈ ಮದುವೆ ಇಷ್ಟವಿಲ್ಲದ ಈ 16 ವರ್ಷದ ಬಾಲೆ ತಾನು ಪ್ರೀತಿಸುತ್ತಿರುವ ಯುವಕನೊಂದಿಗೆ ಓಡಿ ಹೋಗಲು ಮುಂದಾಗಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯನ್ನು ನಡುರಸ್ತೆಯಲ್ಲೇ ಸೋದರ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ತಿಳಿದು ಬಂದಿದೆ.

ಕೊಲೆ ಮಾಡಿದ ಆರೋಪಿ ಹಸೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಇಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿಯಲಾಗಿದೆ. ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.




ಘಟನೆಗೆ : ಮುಸ್ಲಿಂ ಸಮುದಾಯದ ಯುವತಿ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಆಕೆ ತನ್ನ ಗೆಳೆಯನ ಜೊತೆ ಓಡಿ ಹೋಗಿದ್ದಳು. ಅಪ್ರಾಪ್ತೆಯಾಗಿದ್ದರಿಂದ ಈ ಜೋಡಿಯನ್ನು ಮರಳಿ ಕರೆತಂದ ಪೊಲೀಸರು ಬಾಲಕಿಯನ್ನು ಆಕೆಯ ಕುಟುಂಬದವರ ಸುಪರ್ದಿಗೆ ನೀಡಿದ್ದರು. ಆದರೆ ಮರ್ಯಾದೆಗೆ ಅಂಜಿದ ಬಾಲಕಿಯ  ಕುಟುಂಬ ಯುವಕನ ವಿರುದ್ಧವೂ ಯಾವುದೇ ಪ್ರಕರಣವನ್ನು ದಾಖಲಿಸಿರಲಿಲ್ಲ, ಇದಾದ ನಂತರ ಬಾಲಕಿಯನ್ನು ಆಕೆಯ ಕುಟುಂಬದವರು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಮಾತ್ರ ತಾನು ಮದುವೆಯಾದರೆ ಆತನನ್ನೇ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ಆಕೆಯ ಈ ಹಠಮಾರಿ ವರ್ತನೆಯಿಂದ ಆಕ್ರೋಶಗೊಂಡ ಕುಟುಂಬದವರು ಆಕೆಗೆ ಮತ್ತೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದಾರೆ. ಆದರೂ ಬಾಲಕಿ ಮಾತ್ರ ತಾನು ತನ್ನ ಪ್ರೇಮಿಯನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆಕೆಯ ಸೋದರ ಆಕೆಯನ್ನು ನಡುರಸ್ತೆಯಲ್ಲೇ ಹತ್ಯೆ ಮಾಡಿದ್ದಾನೆ.

Post a Comment

0 Comments