ಪಾಟ್ನಾ: ಬಿಹಾರದಲ್ಲಿ ಮಹಿಳೆಯೊಬ್ಬರು ತನ್ನ ಗಂಡನನ್ನು ಬಿಟ್ಟು ಸಂಬಂಧಿ ಮಹಿಳೆಯೊಂದಿಗೆ ವಿವಾಹವಾಗಿರುವ ಅಪರೂಪದ ಘಟನೆ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ ಸಂಭವಿಸಿದೆ.
ಸುಮನ್ ಹಾಗೂ ಶೋಭಾ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಕೌಟುಂಬಿಕ ಸಂಬಂಧದ ಹೊರತಾಗಿ ಪ್ರೇಮ ಬಂಧವಿದೆ. ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ
ಶೋಭಾ ಇನ್ನೊಬ್ಬರ ಜತೆ ವಿವಾಹವಾಗುವುದು ಸುಮಾನ್ ಗೆ ಇಷ್ಟವಿರಲಿಲ್ಲ. ಈ ಕಾರಣದಿಂದ ಸುಮನ್ ಗಂಡನ ಮನೆಬಿಟ್ಟು ಶೋಭಾಳ ಜತೆ ಓಡಿ ಹೋಗಿ ಮದುವೆ ಆಗಿದ್ದಾರೆ. ಇಬ್ಬರು ಬೆಳವ ಗ್ರಾಮದ ದೇವಸ್ಥಾನದಲ್ಲಿ ಹಾರ ಬದಲಾಯಿಸಿಕೊಂಡು, ತಾಳಿ ಕಟ್ಟಿ ಸಪ್ತಪದಿ ತುಳಿದಿದ್ದಾರೆ.
“ಶೋಭಾ ನನ್ನ ಜೀವನದ ಪ್ರೀತಿ. ಬೇರೆಯವರನ್ನು ಮದುವೆಯಾದರೆ ಆಕೆಯನ್ನು ಕಳೆದುಕೊಳ್ಳುವುದನ್ನು ನಾನು ಊಹಿಸಲೂ ಸಾಧ್ಯವಾಗಲಿಲ್ಲ. ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭೀತಿ ಮದುವೆ ಆಗಲು ಪ್ರೇರಣೆ ನೀಡಿತು” ಎಂದು ಸೊಸೆ ಸುಮನ್ ಹೇಳುತ್ತಾರೆ.
ಮದುವೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಜೀವನದ ಕೊನೆಯವರೆಗೂ ನಾವಿಬ್ಬರೂ ಜೊತೆಯಾಗಿ ಇರುತ್ತೇವೆ ಎಂದಿದ್ದಾರೆ.
0 Comments