ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಲಾಡ್ಜ್ ಒಂದರಲ್ಲಿ ಯಾವುದೇ ಮಾಹಿತಿ ನೀಡದೆ ರೂಂ ಪಡೆದಿದ್ದ ಮುಸ್ಲಿಂ ಯುವಕ, ಹಿಂದೂ ಯುವತಿಯನ್ನು ಪೊಲೀಸರು ಮನೆಗೆ ಕಳುಹಿಸಿದ ಘಟನೆ ಪುತ್ತೂರಿನಲ್ಲಿ ಸಂಭವಿಸಿದೆ.
ನೆಹರೂ ನಗರದಲ್ಲಿ ಕಾರ್ಯಾಚರಿಸುತ್ತಿರುವ ಲಾಡ್ಜ್ ನಲ್ಲಿ ಜೋಡಿ ರೂಂ ಪಡೆದಿದ್ದಾರೆ ಎಂದು ಪೋಲೀಸರಿಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಡ್ಜ್ ನ ದಾಖಲೆ ಪುಸ್ತಕ ಪರಿಶೀಲಿಸಿದ್ದಾರೆ. ಆದರೆ ಜೋಡಿಯ ದಾಖಲೆ ಪಡೆಯದೆ ಲಾಡ್ಜ್ ಸಿಬ್ಬಂದಿಗಳು ರೂಂ ನೀಡಿದ್ದಾರೆ. ಬಳಿಕ ಪೊಲೀಸರು ಅನ್ಯಕೋಮಿನ ಜೋಡಿಯನ್ನು ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ್ದಾರೆ.
0 Comments