ಹುಬ್ಬಳ್ಳಿ: ಹಳೇಹುಬ್ಬಳ್ಳಿ ಆನಂದನಗರ ರಸ್ತೆಯ ನಿರ್ಮಾಣ ಹಂತದ ಜಯದೇವ ಆಸ್ಪತ್ರೆ ಹತ್ತಿರ ಇಂದು ಬೆಳಗಿನ ಜಾವ ಗಾಂಜಾ ಮಾರುತ್ತಿದ್ದ 9 ಜನರನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಆರೋಪಿಗಳನ್ನು ಮಂಗಳವಾರ ಆ.13ರಂದು ಬಂಧಿಸಿ ಅವರಿಂದ ಅಂದಾಜು 1.25ಲಕ್ಷ ರೂ. ಮೌಲ್ಯದ 1.5ಕೆಜಿ ಗಾಂಜಾ, 6 ಮೊಬೈಲ್ ಪೋನ್ಸ್, 2ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಮಿರಜ್‌ನ ಆಸ್ಪಕ ಮುಲ್ಲಾ, ಹಳೇಹುಬ್ಬಳ್ಳಿಯ ಶಿವಕುಮಾರ ಊರ್ಫ ಮಚ್ಚಿ ತುಮಕೂರ, ಇಕ್ಬಾಲ್ ಅಹ್ಮದ ಊರ್ಫ ಸಾಹೇಬ ಮುದಗಲ್, ಆರೀಫ ಊರ್ಫ ಚರಕ ಗಲಗಲಿ, ಅಭಿಷೇಕ ದೇವಮಾನೆ, ಅಮೃತ ಹವಳದ, ಮೊಹ್ಮದರೆಹಾನ ಗೋಕಾಕ, ಸಾಧಿಕ ಕಿತಾಬ್‌ವಾಲೆ, ಮೆಹಬೂಬಸಾಬ ಡೌಗಿ ಮಕಾಂದಾರ ಎಂದು ಗುರುತಿಸಲಾಗಿದೆ.
ಗಾಂಜಾ ಮಾರುತ್ತಿದ್ದ ಹಾಗೂ ಅದನ್ನು ಕೆಲವರು ಖರೀದಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಪೊಲೀಸರು ದಾಳಿ ನಡೆಸಿ, ಗಾಂಜಾ ಸಮೇತ ಒಂಬತ್ತು ಜನರನ್ನು ಬಂಧಿಸಿದ್ದಾರೆ.
ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 Comments