Header Ads Widget

ಮೂಡುಸಗ್ರಿ ಹಾನಿಯಾದ ಕಿರುಸೇತುವೆ ₹9.50 ಲಕ್ಷ ವೆಚ್ಚದಲ್ಲಿ ಶೀಘ್ರ ಮರು ನಿರ್ಮಾಣ : ಯಶ್ ಪಾಲ್ ಸುವರ್ಣ..!!


ಉಡುಪಿ: ಮೂಡುಸಗ್ರಿ ವಾರ್ಡಿನ ಇಂದ್ರಾಳಿ ಸಗ್ರಿ ಶಾಲೆ ಸಂಪರ್ಕ ರಸ್ತೆಯ ಕಿರು ಸೇತುವೆ ಕುಸಿತಗೊಂಡಿರುವ ಸ್ಥಳಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಿರು ಸೇತುವೆ ಹಾನಿಯಾಗಿ ವಾಹನ ಸಂಚಾರ ನಿಷೇಧವಾದ ಹಿನ್ನೆಲೆಯಲ್ಲಿ ಈ ಭಾಗದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಈಗಾಗಲೇ ನಗರಸಭೆಯ ಮೂಲಕ ಹೊಸ ಕಿರು ಸೇತುವೆಗೆ 9.50 ಲಕ್ಷ ಅನುದಾನ ಒದಗಿಸಿದ್ದು ತಕ್ಷಣ ಕಾಮಗಾರಿ ಆರಂಭಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶ್ರೀಮತಿ ಭಾರತಿ ಪ್ರಶಾಂತ್, ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್, ಪಕ್ಷದ ಪ್ರಮುಖರಾದ ಪ್ರಶಾಂತ್, ಹೇಮಂತ, ಸದಾನಂದ ನಾಯಕ್, ಸುಮಾ ನಾಯ್ಕ್ , ನಗರಸಭೆಯ ಎ ಇ ಇ ದುರ್ಗಾಪ್ರಸಾದ್, ಇಂಜಿನಿಯನರ್ ಚೇತನ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments